ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯೊಂದು ಸಿಗ್ತಿದೆ. ರಜೆ ಪ್ರಮಾಣ ರಿಯಾಯಿತಿ ( ಎಲ್ ಟಿ ಸಿ) ಲಾಭ ಪಡೆಯಲು ವಿಮಾನ ಟಿಕೆಟ್ ಹಾಗೂ ರೈಲ್ವೆ ಟಿಕೆಟ್ ಬುಕ್ ಮಾಡಿದ್ದ ನೌಕರರಿಗೆ ಲಾಕ್ ಡೌನ್ ನಿಂದ ಪ್ರಯಾಣ ಸಾಧ್ಯವಾಗಿರಲಿಲ್ಲ.
ನೌಕರರಿಗೆ ನೆಮ್ಮದಿ ಸುದ್ದಿ ನೀಡಲು ಕೇಂದ್ರ ಸರ್ಕಾರ ಆಫೀಸ್ ಮೆಮೊರಾಂಡಮ್ ನಲ್ಲಿ ಮೂರು ಹೊಸ ಬದಲಾವಣೆ ಮಾಡಲು ಮುಂದಾಗಿದೆ.
ಲಾಕ್ ಡೌನ್ ಕಾರಣಕ್ಕೆ ಅನೇಕ ವಿಮಾನಗಳ ಹಾರಾಟ ರದ್ದಾಗಿದೆ ಎಂಬುದನ್ನು ಡಿಒಪಿಟಿ ಗಮನಿಸಿದೆ. ಟಿಕೆಟ್ ಕಾಯ್ದಿರಿಸಿದ್ದ ಹಾಗೂ ಟಿಕೆಟ್ ರದ್ದು ಮಾಡಿದ್ದ ಸರ್ಕಾರಿ ನೌಕರರಿಗೆ ವಿಮಾನ ಸಂಸ್ಥೆಗಳಿಂದ ಹಣ ವಾಪಸ್ ಸಿಕ್ಕಿಲ್ಲ. ಕೆಲವೊಮ್ಮೆ ವಿಮಾನ ಸಂಸ್ಥೆಗಳು ಮೊತ್ತವನ್ನು ಕ್ರೆಡಿಟ್ ಶೆಲ್ ನಲ್ಲಿಡುತ್ತದೆ. ಅಂದ್ರೆ ಒಂದು ವರ್ಷದೊಳಗೆ ಪ್ರಯಾಣಿಕರು ಇದನ್ನು ಬಳಸಬಹುದು. ಆದ್ರೆ ನೌಕರರಿಗೆ ಇದು ದುಬಾರಿಯಾಗಿದೆ. ಒಂದು ವೇಳೆ ಪ್ರಯಾಣ ಮಾಡದೆ ಹೋದಲ್ಲಿ ಎಲ್ ಟಿ ಸಿ ಮುಂಗಡದೊಂದಿಗೆ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ.
ಪ್ರಯಾಣ ರದ್ದಾದ ನಂತ್ರ ಪ್ರಯಾಣಿಕರು ರದ್ದತಿ ಶುಲ್ಕವನ್ನು ನೀಡಬೇಕಾಗುತ್ತದೆ. ಕೆಲ ನೌಕರರು ಈಗಾಗಲೇ ರದ್ದತಿ ಶುಲ್ಕವನ್ನು ಪಾವತಿಸಿದ್ದಾರೆ. ಇದು ಅವ್ರ ಆರ್ಥಿಕ ಪರಿಸ್ಥಿತಿ ಮೇಲೆ ಹೊಡೆತ ನೀಡಿದೆ. ನೌಕರರ ಕಷ್ಟ ಗಮನಿಸಿದ ಕೇಂದ್ರ ಸರ್ಕಾರ ನೌಕರರ ರದ್ದತಿ ಶುಲ್ಕವನ್ನು ಮರುಪಾವತಿ ಮಾಡಲು ನಿರ್ಧರಿಸಿದೆ.