ತನ್ನ ಪತಿ ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಪತ್ನಿಯೊಬ್ಬಳು ಪತಿಯನ್ನೇ ಇರಿದಿದ್ದಾಳೆ. ಆದರೆ ಬಳಿಕ ಆ ಫೋಟೋ ಈಕೆಯ ಹಿಂದಿನ ಫೋಟೋಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಲಿಯೋನಾರಾ ಆರ್. ಎಂಬಾಕೆಯನ್ನ ಮೆಕ್ಸಿಕೋ ಪೊಲೀಸರು ಬಂಧಿಸಿದ್ದಾರೆ. ಪತಿ ಜುಯಾನ್ ಎನ್. ಎಂಬಾತನನ್ನ ಆಕೆ ಚಾಕುವಿನಿಂದ ಇರಿದಿದ್ದಾಳೆ.
ಜುಯಾನ್ ತನ್ನ ಮೊಬೈಲ್ನಲ್ಲಿ ಮಹಿಳೆಯೊಂದಿಗಿರುವ ಫೋಟೋವನ್ನು ನೋಡುತ್ತಿದ್ದ. ಇದನ್ನ ಗಮನಿಸಿದ ಮಹಿಳೆ ತನ್ನ ಪತಿ ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಭಾವಿಸಿದ್ದಾಳೆ. ಪತಿಗೆ ಘಟನೆ ಬಗ್ಗೆ ವಿವರಣೆ ನೀಡಲು ಅವಕಾಶ ನೀಡದೆ ಆಕೆ ಪದೇ ಪದೇ ಇರಿದಿದ್ದಾಳೆ.
ಮದುವೆ ದಿನ ಮುಖದ ಕಾಂತಿ ಹೆಚ್ಚಾಗಬೇಕೆ…? ಅನುಸರಿಸಿ ಈ ಆಹಾರ ಸೂತ್ರ….!
ಜುವಾನ್ ಅಂತಿಮವಾಗಿ ತನ್ನ ಪತ್ನಿಯ ಕೈಯಿಂದ ಚಾಕುವನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ತಾನು ನೋಡುತ್ತಿದ್ದ ಈ ಫೋಟೋಗಳು ಆಕೆಯ ಹಳೆಯ ಫೋಟೋಗಳು ಎಂಬುದನ್ನ ಮನವರಿಕೆ ಮಾಡಿಕೊಟ್ಟಿದ್ದಾನೆ. ಮನೆಯಲ್ಲಿ ಕಿರುಚುವ ಶಬ್ದವನ್ನ ಕೇಳಿದ ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫೋಟೋದಲ್ಲಿ ಮಹಿಳೆ ತೆಳ್ಳಗಿದ್ದು ಮೇಕಪ್ ಧರಿಸಿದ್ದರಿಂದ ಆಕೆಗೆ ತನ್ನನ್ನ ತಾನೇ ಗುರುತಿಸಲು ಅಸಾಧ್ಯವಾಗಿ ಹೋಗಿದೆ.