ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ 27-01-2021 3:40PM IST / No Comments / Posted In: Latest News, International ಹಣದಿಂದ ಖುಷಿಯನ್ನ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂಬ ಮಾತನ್ನ ನೀವು ಕೇಳೆ ಇರ್ತೀರಿ. ಎಷ್ಟು ಸಂಪತ್ತು ನಿಮ್ಮ ಬಳಿ ಇದೆ ಅನ್ನೋದರ ಆಧಾರದ ಮೇಲೆ ವ್ಯಕ್ತಿಯ ಸಂತೋಷವನ್ನ ಅಳೆಯೋಕೆ ಸಾಧ್ಯವಿಲ್ಲ ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಆದರೆ ಇನ್ನು ಕೆಲವರು ದುಡ್ಡೊಂದಿದ್ರೆ ಸಾಕು ಇಡೀ ಜಗತ್ತೇ ಅಂಗೈಲಿ ಇರುತ್ತೆ ಅಂತಾನೂ ಹೇಳ್ತಾರೆ. ಆದರೆ ಈ ಎರಡು ಮಾತಲ್ಲಿ ಯಾವುದನ್ನ ಒಪ್ಪಿಕೊಳ್ಳಬೇಕು ಅನ್ನೋದನ್ನ ನಿರ್ಧರಿಸೋದು ತುಂಬಾನೇ ಕಷ್ಟದ ವಿಚಾರ. ಆದರೆ ಇತ್ತೀಚೆಗಷ್ಟೇ ನಡೆಸಲಾದ ವೈಜ್ಞಾನಿಕ ಸಂಶೋಧನೆಯೊಂದರ ಪ್ರಕಾರ ಹಣದಿಂದ ಸಂತೋಷವನ್ನ ಸಂಪಾದಿಸಬಹುದೆಂಬ ಅಂಶ ತಿಳಿದು ಬಂದಿದೆ. ಹೊಸ ಅಧ್ಯಯನದ ಪ್ರಕಾರ ಒಂದು ವರ್ಷಕ್ಕೆ 54 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನ ಸಂಪಾದಿಸುವ ವ್ಯಕ್ತಿಗಳು ತುಂಬಾನೇ ಸಂತೋಷವಾಗಿ ಇರ್ತಾರಂತೆ. ಇಷ್ಟೊಂದು ಆದಾಯ ಹೊಂದಿದ ವ್ಯಕ್ತಿಗಳು ತಮ್ಮ ಜೀವನದ ಬಗ್ಗೆ ತೃಪ್ತಿಯನ್ನ ಹೊಂದಿರುತ್ತಾರಂತೆ. ಹೆಚ್1ಬಿ ವೀಸಾದಾರರಿಗೆ ಬಿಗ್ ರಿಲೀಫ್: ಬಿಡೆನ್ ಸರ್ಕಾರದಿಂದ ಮಹತ್ವದ ನಿರ್ಧಾರ ವಿಶ್ವದ ಬಹುತೇಕ ಪ್ರಮುಖ ಅರ್ಥಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಅದರಲ್ಲೂ ಈ ಆದಾಯ ತಿಂಗಳ ಕೊನೆಯಲ್ಲೇ ಸಿಗುವಂತೆ ಇದ್ದರಂತೂ ಸಂತೋಷಕ್ಕೆ ಪಾರವೇ ಇಲ್ಲ ಎಂದು ಅನೇಕರು ಹೇಳಿದ್ದಾರಂತೆ. ಈ ಅಧ್ಯಯನದ ಪ್ರಕಾರ 54 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ವ್ಯಕ್ತಿಗಳು ಜೀವನದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ಫಾರ್ ಬಿಸಿನೆಸ್‌ನ ಹಿರಿಯ ಸಹೋದ್ಯೋಗಿ 17,25,994 ಉದ್ಯೋಗಿಗಳನ್ನ ಸಂಪರ್ಕಿಸಿ ಈ ಮಾಹಿತಿಯನ್ನ ಕಲೆ ಹಾಕಿದ್ದಾರೆ .