ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ. ಗ್ರಾಹಕರು ತಮ್ಮ ಅಗತ್ಯಗಳನ್ನು ಪೂರೈಸಲು ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತಿದ್ದಾರೆ. ನಂತ್ರ ಮಾಸಿಕ ಕಂತುಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಮುನ್ನ ಕೆಲವೊಂದು ಸಂಗತಿಯನ್ನು ತಿಳಿದಿರಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆದಾರರು ಸರಿಯಾದ ಸಮಯದಲ್ಲಿ ಬಾಕಿ ಪಾವತಿಸಬೇಕು. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಲ್ಲಿ ಮುಂದೆ ಸಾಲ ಪಡೆಯುವುದು ಸುಲಭವಾಗುತ್ತದೆ. ನಿಗದಿತ ಮಿತಿಯಲ್ಲಿ ಕ್ರೆಡಿಟ್ ಕಾರ್ಡ್ ಪಾವತಿ ಮಾಡಿದ್ರೆ ನೀವು ಹೆಚ್ಚುವರಿ ಬಡ್ಡಿ ಪಾವತಿ ಮಾಡಬೇಕಾಗಿಲ್ಲ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ಇಎಂಐ ಆಗಿ ಪಾವತಿಸುತ್ತಿದ್ದರೆ ಬಡ್ಡಿ ಪಾವತಿಸಬೇಕಾಗುತ್ತದೆ. ಇದಲ್ಲದೆ ಸಂಸ್ಕರಣಾ ಶುಲ್ಕ, ಪೂರ್ಣ ಪಾವತಿ ಶುಲ್ಕ, ಜಿಎಸ್ಟಿಯನ್ನು ನೀಡಬೇಕಾಗುತ್ತದೆ.
ಕೃಷಿ ಸಾಲ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಂದು ಗುಡ್ ನ್ಯೂಸ್
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದು ಒಳ್ಳೆಯದು. ಎಲ್ಲ ಬಾರಿ ಬಿಲ್ ಪಾವತಿಗೆ ಇಎಂಐ ಆಯ್ಕೆ ಆಯ್ದುಕೊಂಡರೆ ಬ್ಯಾಂಕ್ ಗೆ ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಇದು ನಿಮಗೆ ಲಾಭಕರವಲ್ಲ. ಸಾಧ್ಯವಾದಷ್ಟು ಒಂದೇ ಬಾರಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಪ್ರಯತ್ನಿಸಿ.