ಪತಿ ಸಂಬಂಧಿಕರನ್ನು ಭೇಟಿಯಾಗಲು 18 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ತೆರಳಿದ್ದ 65 ವರ್ಷದ ಹಸೀನಾ ಬೇಗಂ ಕೊನೆಗೂ ಭಾರತಕ್ಕೆ ಮರಳಿದ್ದಾಳೆ. ಹಸೀನಾ ಬೇಗಂ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಈ ಕಾರಣಕ್ಕೆ ಅವರನ್ನು ಲಾಹೋರ್ ಜೈಲಿನಲ್ಲಿ ಇಡಲಾಗಿತ್ತು. ಕಳೆದ 18 ವರ್ಷಗಳಿಂದ ಲಾಹೋರ್ ಜೈಲಿನಲ್ಲಿದ್ದ ಹಸೀನಾ ಬೇಗಂ ಈಗ ವಾಪಸ್ ಆಗಿದ್ದಾರೆ.
ಔರಂಗಾಬಾದ್ ಪೊಲೀಸರು ಈ ಬಗ್ಗೆ ವರದಿ ಸಲ್ಲಿಸಿದ್ದರು. ನಂತ್ರ ಬೇಗಂ ಮಂಗಳವಾರ ಭಾರತಕ್ಕೆ ವಾಪಸ್ ಆಗಿದ್ದಾರೆ. ಔರಂಗಾಬಾದ್ ಪೊಲೀಸರು ಹಸೀನಾ ಬೇಗಂರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ನಾನು ತುಂಬಾ ತೊಂದರೆಯನ್ನು ಎದುರಿಸಿದ್ದೇನೆ. ಸ್ವದೇಶಕ್ಕೆ ಈಗ ವಾಪಸ್ ಆಗಿದ್ದು, ಸ್ವರ್ಗಕ್ಕೆ ಬಂದ ಅನುಭವವಾಗ್ತಿದೆ ಎಂದು ಬೇಗಂ ಹೇಳಿದ್ದಾರೆ. ನನ್ನನ್ನು ಹೊರಗೆ ತರಲು ಪ್ರಯತ್ನಿಸಿದ ಔರಂಗಾಬಾದ್ ಪೊಲೀಸರಿಗೆ ಧನ್ಯವಾದ ಸಲ್ಲಿಸುತ್ತೇನೆಂದು ಬೇಗಂ ಹೇಳಿದ್ದಾರೆ.
ನಾನು ನಿರಪರಾಧಿ ಎಂದು ಬೇಗಂ ಪಾಕಿಸ್ತಾನ ನ್ಯಾಯಾಲಯದ ಮುಂದೆ ಹೇಳಿದ್ದರು. ಇದಾದ ನಂತ್ರ ಕೋರ್ಟ್ ಹೆಚ್ಚಿನ ಮಾಹಿತಿಯನ್ನು ಕೇಳಿತ್ತು. ಔರಂಗಾಬಾದ್ ನಲ್ಲಿ ಬೇಗಂ ಹೆಸರಿನಲ್ಲಿ ಮನೆ ಇರುವ ಬಗ್ಗೆ ಔರಂಗಾಬಾದ್ ಪೊಲೀಸರು ಪಾಕಿಸ್ತಾನ ಕೋರ್ಟ್ ಗೆ ಮಾಹಿತಿ ನೀಡಿದ್ದರು. ಇದಾದ ನಂತ್ರ ಪಾಕಿಸ್ತಾನ ಕೋರ್ಟ್, ಬೇಗಂರನ್ನು ಬಿಡುಗಡೆ ಮಾಡಿದೆ.