ಕೊರೊನಾ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರವು ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದು, ದೇಶವಾಸಿಗಳ ಚಿತ್ತ ಬಜೆಟ್ ನತ್ತ ನೆಟ್ಟಿದೆ. ಕೊರೊನಾದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜನರು ಬಜೆಟ್ ನಲ್ಲಿ ಏನಿರಲಿದೆ ಎಂಬ ಕುತೂಹಲದಿಂದ ಕಣ್ಣರಳಿಸಿ ಕುಳಿತಿದ್ದಾರೆ.
ಪ್ರಮುಖವಾಗಿ ಆದಾಯ ತೆರಿಗೆ ಮಿತಿ ಹೆಚ್ಚಳ ಆಗಲಿದೆಯೇ, ಕನಿಷ್ಠ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಮಾಣವಾದರೂ ಏರಿಕೆಯಾಗಲಿದೆಯೇ ಎಂಬ ಚಿಂತೆ ಕಾಡಲಾರಂಭಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಇದರಿಂದ ವೈಯಕ್ತಿಕ ವೆಚ್ಚ ಹೆಚ್ಚಾಗಿದೆ. ವಿದ್ಯುತ್ ಶುಲ್ಕ, ಇಂಟರ್ ನೆಟ್ ಸೇರಿದಂತೆ ಇನ್ನಿತರೆ ವೆಚ್ಚಗಳನ್ನು ಅನಿವಾರ್ಯವಾಗಿ ತಮ್ಮ ಜೇಬಿನಿಂದಲೇ ಭರಿಸಿದ ಅನೇಕ ನಿದರ್ಶನಗಳಿವೆ. ಹೀಗಾಗಿ ಕನಿಷ್ಠ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಮಾಣವನ್ನು 1 ಲಕ್ಷ ರೂ.ವರೆಗೆ ಹೆಚ್ಚಿಸಬೇಕೆಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ ಮಹಾಮಂಡಲ (ಫಿಕ್ಕಿ) ಆಗ್ರಹಿಸಿದೆ.
ಇದರಿಂದ ಬರುವ ಆದಾಯದಲ್ಲಿ ಸ್ವಲ್ಪ ಹೆಚ್ಚಿಗೆ ಉಳಿತಾಯ ಆಗಲಿದೆ ಎಂಬುದು ಮಧ್ಯಮವರ್ಗದವರ ಅಂಬೋಣ.