ಮುಂಬೈ: ಅಮೆರಿಕಾದಿಂದ 1 ಮಿಲಿಯನ್ ಡಾಲರ್ ಪ್ರಶಸ್ತಿ ಗೆದ್ದ ಮಹಾರಾಷ್ಟ್ರದ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಅವರು ನೀರಿನ ರಕ್ಷಣೆಯ ಕುರಿತು ಪಾಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಳೆ ನೀರು ಕೊಯ್ಲು, ನೀರಿನ ಸಂರಕ್ಷಣೆ ಕುರಿತು ಮಕ್ಕಳಿಗೆ ಹಾಗೂ ಇತರರಿಗೂ ಪಾಠ ಮಾಡುವ ಅವರಿಗೆ 2020 ಡಿಸೆಂಬರ್ ನಲ್ಲಿ ಗ್ಲೋಬಲ್ ಟೀಚರ್ಸ್ ಅವಾರ್ಡ್ ಬಂದಿತ್ತು. ಆ ಮೂಲಕ ಅವರು ಮಹಾರಾಷ್ಟ್ರದಲ್ಲಿ ಮನೆ ಮಾತಾಗಿದ್ದರು.
ರಂಜಿತ್ ಮೂಲತಃ ಮಹಾರಾಷ್ಟ್ರ ಕೊಲ್ಹಾಪುರ ಜಿಲ್ಲೆಯ ಪ್ರೀತೆವಾಡಿ ಗ್ರಾಮದವರು. ನೆಟ್ವರ್ಕ್ 18 ಹಾಗೂ ಹಾರ್ಪಿಕ್ ಕಂಪನಿಗಳು ಕೈಗೊಂಡ ಮಿಶನ್ ಪಾನಿ ಎಂಬ ಕಾರ್ಯಕ್ರಮದ ಅಡಿ ನೀರಿನ ಪಾಠ ಪ್ರಾರಂಭಿಸಿದ್ದಾರೆ.