ನವದೆಹಲಿ: ಅನ್ನದಾತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಕೃಷಿ ಸಾಲ ವಿತರಣೆ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ಕೃಷಿ ಸಾಲ ವಿತರಣೆ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆಹೆಚ್ಚಿಸುವ ಸಾಧ್ಯತೆ ಇದೆ. 2022 ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಅನೇಕ ಕೃಷಿ ಯೋಜನೆಗಳಿಗೆ ಆದ್ಯತೆ ನೀಡಲಿದೆ.
ಕಳೆದ ವರ್ಷ 15 ಲಕ್ಷ ಕೋಟಿ ರೂಪಾಯಿ ಗುರಿ ನಿಗದಿ ಮಾಡಲಾಗಿದ್ದು, ಅದನ್ನು 19 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗುವುದು. ರೈತರಿಗೆ ಬಂಡವಾಳ ಕೊರತೆ ಎದುರಾಗದಂತೆ ಮತ್ತು ಬಡ್ಡಿ ಸಾಲದಿಂದ ಮುಕ್ತಗೊಳಿಸುವ ಉದ್ದೇಶದಿಂದ ಕೃಷಿ ಸಾಲ ಮೊತ್ತ ಹೆಚ್ಚಿಸಲಾಗುವುದು. ಸುಲಭ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.