72ನೇ ಗಣರಾಜ್ಯೋತ್ಸವ ದಿನವಾದ ಇಂದು ಸಾಕಷ್ಟು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನ ಕೋರಿದ್ದಾರೆ.
ಅದೇ ರೀತಿ ಬಾಲಿವುಡ್ ನಟಿ ಹಾಗೂ ಫಿಟ್ನೆಸ್ ಮಾರ್ಗದರ್ಶಕಿ ಶಿಲ್ಪಾ ಶೆಟ್ಟಿ ಕೂಡ ಟ್ವಿಟರ್ನಲ್ಲಿ ಶುಭಾಶಯ ಕೋರಲು ಹೋಗಿ ಯಡವಟ್ಟು ಮಾಡಿದ್ದಾರೆ.
ಶಿಲ್ಪಾಶೆಟ್ಟಿ ಗಣರಾಜ್ಯೋತ್ಸವ ದಿನದ ಶುಭ ಕೋರಲು ಹೋಗಿ ತಪ್ಪಾಗಿ ಸ್ವತಂತ್ರ ದಿನದ ಶುಭಾಶಯ ಎಂದು ಟ್ವೀಟಾಯಿಸಿ ಪೇಚಿಗೆ ಸಿಲುಕಿದ್ದಾರೆ. ಟ್ವಿಟರ್ನಲ್ಲಿ ಶಿಲ್ಪಾಶೆಟ್ಟಿ, 72ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಇಂಗ್ಲೀಷ್ನಲ್ಲಿ ರಿಪಬ್ಲಿಕ್ ಡೇ ಎಂದೇ ಬರೆದಿದ್ದಾರೆ. ತಪ್ಪಿನ ಬಗ್ಗೆ ಅರಿವಾಗುತ್ತಿದ್ದಂತೆಯೇ ಶಿಲ್ಪಾ ಇದನ್ನ ಸರಿಪಡಿಸಿದ್ದಾರೆ. ಆದರೂ ಕೂಡ ಸ್ಟಾರ್ ನಟಿಯ ಈ ಪ್ರಮಾದವನ್ನ ನೆಟ್ಟಿಗರು ಕ್ಷಮಿಸಿದಂತೆ ಕಾಣಲಿಲ್ಲ.