ಬೆಂಗಳೂರು: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಧ್ಯೇಯ ಮರೆತು ಕಾರ್ಪೊರೇಟ್ ಕಂಪನಿ, ಎಂ.ಎನ್.ಸಿ. ಕಂಪನಿ ಬೇಕು ಎಂದು ಹೇಳುತ್ತಿದ್ದೀರಿ. ಅವರ ಪರವಾಗಿ ನಿಯಮ ತರುತ್ತಿದ್ದೀರಿ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ, ದೇಶಕ್ಕಾಗಿ ನಮ್ಮ ಅಪ್ಪ, ನಮ್ಮ ಅಮ್ಮ ಕೂಡ ದುಡಿದಿದ್ದಾರೆ. ಗೋಹತ್ಯೆ ತಡೆ ಕಾಯ್ದೆ ಬೇಕೇ? ಬೇಡವೇ? ಎನ್ನುವುದನ್ನು ನಾವೇ ನಿರ್ಧರಿಸುತ್ತೇವೆ. ಹಸು ಸಾಕುವುದು ಹೇಗೆಂದು ನಮಗೆ ಜಯನಗರ, ಬಸವನಗುಡಿಯವರು ನಮಗೆ ಹೇಳಿಕೊಡಬೇಕಿಲ್ಲ ಎಂದು ಗುಡುಗಿದ್ದಾರೆ.
ಅನ್ನದಾತರ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಿ. ಇಲ್ಲವಾದರೆ ರಾಜಧಾನಿ ಉಸಿರುಗಟ್ಟುವಂತೆ ಪ್ರತಿಭಟನೆ ನಡೆಸುತ್ತೇವೆ ಎಂದು ಫ್ರೀಡಂ ಪಾರ್ಕ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.