alex Certify ನಿರಂತರ ಅತ್ಯಾಚಾರ, ಬ್ಲಾಕ್​ಮೇಲ್​ಗೆ ಬೆದರಿ ಮಹಿಳಾ SI ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರ ಅತ್ಯಾಚಾರ, ಬ್ಲಾಕ್​ಮೇಲ್​ಗೆ ಬೆದರಿ ಮಹಿಳಾ SI ಆತ್ಮಹತ್ಯೆ

ಉತ್ತರ ಪ್ರದೇಶದ ಮೊರಾದಾಬಾದ್​ನ ಪೊಲೀಸ್​ ಅಕಾಡೆಮಿ ಭೋದಕನ ವಿರುದ್ಧ ಸೋಮವಾರ ಸುಲಿಗೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ.

ಮಹಿಳಾ ಸಬ್​​ ಇನ್ಸ್​ಪೆಕ್ಟರ್​​ ಬುಲಂದರ್​ಶೆಹರ್​ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆಕೆಗೆ ಈ ಆರೋಪಿ ನಿರಂತರ ಅತ್ಯಾಚಾರ ಹಾಗೂ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿ ಹಾಗೂ ಮಹಿಳಾ ಎಸ್ಐ ಸಂಬಂಧದಲ್ಲಿದ್ದರು ಎಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣವನ್ನ ದಾಖಲಿಸಲಾಗಿಲ್ಲ. ಇನ್ನು ಈ ವಿಚಾರವಾಗಿ ಮಾತನಾಡಿ ಎಸ್​ಎಸ್​ಪಿ ಸಂತೋಷ್​ ಕುಮಾರ್, ಮಹಿಳಾ ಎಸ್​ಐ ಆರೋಪಿಯನ್ನ ಮದುವೆಯಾಗುವವರಿದ್ದರು. ಆದರೆ ಆತ ಇದಕ್ಕೆ ಒಪ್ಪಿರಲಿಲ್ಲ. ಆಕೆ ಮೇಲೆ ಅತ್ಯಾಚಾರ ಎಸೆಗಿದ್ದು ಮಾತ್ರವಲ್ಲದೇ ಬ್ಲ್ಯಾಕ್​ಮೇಲ್​ ಕೂಡ ಮಾಡಿದ್ದರು. ಹೀಗಾಗಿ ಮಹಿಳಾ ಎಸ್​​ಐ ಒತ್ತಡದಿಂದ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.

ಮಹಿಳಾ ಎಸ್​ಐ ಹಾಗೂ ಆರೋಪಿ ಪರಸ್ಪರ 7 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅವರಿಬ್ಬರ ಕಾಲ್​ ರೆಕಾರ್ಡ್ ಪ್ರಕಾರ ಅವರಿಬ್ಬರು ಪ್ರತಿ ದಿನ ಕನಿಷ್ಟ 25 ಬಾರಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಮೃತ ಎಸ್​ಐ ಸಹೋದರ ಪ್ರಕರಣ ಸಂಬಂಧ ದೂರನ್ನ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...