alex Certify BIG NEWS: ಧ್ವಜಾರೋಹರಣದ ಬಳಿಕ ಇಂದು ರಾಜೀನಾಮೆಗೆ ನಿರ್ಧರಿಸಿದ್ದೆ – ಪದೇ ಪದೇ ಖಾತೆ ಬದಲಾವಣೆ ನೋವು ತಂದಿದೆ ಎಂದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಧ್ವಜಾರೋಹರಣದ ಬಳಿಕ ಇಂದು ರಾಜೀನಾಮೆಗೆ ನಿರ್ಧರಿಸಿದ್ದೆ – ಪದೇ ಪದೇ ಖಾತೆ ಬದಲಾವಣೆ ನೋವು ತಂದಿದೆ ಎಂದ ಸಚಿವ

ತುಮಕೂರು: ಜನಪರ ಕೆಲಸಗಳನ್ನು ಮಾಡುವುದು ನನ್ನ ಕನಸು. ಈ ಕನಸಿಗೆ ಅಡ್ದಿಯಾದಾಗ ಸಹಜವಾಗಿ ನೋವಾಯಿತು. ಹಾಗಾಗಿ ಇಂದು ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪದೇಪದೇ ಖಾತೆ ಬದಲಾವಣೆ ಮಾಡಿದ್ದು ಮನಸ್ಸಿಗೆ ನೋವು ತಂದಿತು. ಹಾಗಾಗಿ ರಾಜೀನಾಮೆ ನಿರ್ಧಾರ ಮಾಡಿದ್ದೆ. ಹಿರಿಯರ ಮಧ್ಯಪ್ರವೇಶದಿಂದ ಮತ್ತೆ ನಿರಾವರಿ ಖಾತೆ ಮರಳಿ ಕೊಟ್ಟಿದ್ದಾರೆ. ನೀರಾವರಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲು ನಿರ್ಧರಿಸಿ ಕೇಳಿದ್ದೆ. ನನ್ನ ಕನಸಿಗೆ ಅಡ್ಡಿಯಾದಾಗ ಸಹಜವಾಗಿ ನೋವಾಯಿತು. ಈಗ ನೀಡಿರುವ ಖಾತೆ ಸಮಾಧಾನ ತಂದಿದೆ ಎಂದರು.

ಇನ್ನು ರೈತರ ಪರೇಡ್ ವಿಚಾರವಾಗಿ ಮಾತನಾಡಿದ ಸಚಿವರು ಲಕ್ಷಾಂತರ ಜನ ಸೇರಿದರೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ನೀಡಿಲ್ಲ. ಕಾನೂನು ಪಾಲನೆಯಲ್ಲಿ ಇದು ಸಹಜ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...