ಹೊಸಹೊಸ ಪ್ರಯೋಗಗಳು, ಕ್ರಿಯಾಶೀಲತೆಗಳು ಸಣ್ಣ ಪುಟ್ಟವಾದರೂ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆದು ಬಿಡುತ್ತದೆ. ಈಗ ಕೇರಳ ಟೂರಿಸಂ ಇಲಾಖೆಯ ಮೆಮೆ ಒಂದು ಸುದ್ದಿಯಾಗಿದೆ.
ಅಮೆರಿಕಾ ಸೆನೆಟರ್ ಬರ್ನಿ ಸ್ಯಾನಿಟರ್ ಮಾಸ್ಕ್, ಗ್ಲೌಸ್ ಧರಿಸಿ ಕುಳಿತ ಫೋಟೋವನ್ನು ಬಳಸಿಕೊಂಡು ಮುನ್ನಾರ್ನ ಎಸ್ಟೇಟ್ ಒಂದರ ಫೋಟೊ ಜೊತೆ ಎಡಿಟ್ ಮಾಡಿದ್ದು, ಅದನ್ನು ಕೇರಳ ಪ್ರವಾಸೋದ್ಯಮ ಇಲಾಖೆ ತನ್ನ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಅಬ್ಬಬ್ಬಾ..! ಮೊಸಳೆಯ ಸಮೀಪ ಹೋಗಿದ್ದಲ್ಲದೇ ಅದರ ಬೆನ್ನು ಸವರಿದ ಭೂಪ..!
ಬರ್ನಿ ಸ್ಯಾಂಡರ್ಸ್ ಕುರ್ಚಿಯಲ್ಲಿ ಕುಳಿತ ಫೋಟೋ ಬಳಸಿ, ಮನ್ನಾರ್ ನ ಬಂಡೆಯೊಂದರ ಮೇಲೆ ಕುಳಿತಂತೆ ಎಡಿಟ್ ಮಾಡಲಾಗಿದೆ. ಹಾಗೆ ಗಮನಾರ್ಹ ಶೀರ್ಷಿಕೆ ಕೂಡ ನೀಡಲಾಗಿದೆ.
ಬೆಚ್ಚಗಿನ ಉಲ್ಲನ್ ಗ್ಲೌಸ್ ಧರಿಸಿ, ಕೂಲ್ ಮತ್ತು ಕ್ರಿಸ್ಪಿಯಾದ ಮುನ್ನಾರ್ ಹವಾಮಾನ ಆನಂದಿಸಿ…! ಎಂದು ಪ್ರವಾಸಿಗರನ್ನು ಕೇರಳ ಟೂರಿಸಂ ಆಹ್ವಾನಿಸಿದೆ.
ಎಲ್ಲಿನ ಅಮೆರಿಕಾ ಸೆನೆಟರ್, ಎಲ್ಲಿಯ ಮುನ್ನಾರ್. ಆದರೂ ಈ ಕ್ರಿಯಾಶೀಲತೆಯನ್ನು ನೆಟ್ಟಿಗರು ಕೊಂಡಾಡಿದ್ದರೆ.