ದೇಶದಲ್ಲಿ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಕೊರೊನಾ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮಕಾರತ್ವದ ಬಗ್ಗೆ ಆಧಾರ ರಹಿತ ಹಾಗೂ ದಾರಿತಪ್ಪಿಸುವ ವದಂತಿಗಳನ್ನ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ತಿಳಿಸಿದೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೊರೊನಾ ಲಸಿಕೆ ವಿರುದ್ಧ ವದಂತಿಗಳನ್ನ ಹಬ್ಬಿಸುತ್ತಿವೆ. ಭಾರತದಲ್ಲಿ ಬಳಕೆಯಲ್ಲಿರುವ ಲಸಿಕೆಗಳು ಸುರಕ್ಷಿತ ಹಾಗೂ ಜೀವ ರಕ್ಷಕವಾಗಿದೆ. ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿಗಳನ್ನ ಹರಡೋದ್ರಿಂದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತೆ.
ಆದ್ದರಿಂದ ಲಸಿಕೆಗಳ ಸುರಕ್ಷತೆ ವಿರುದ್ಧ ಆಧಾರ ರಹಿತ ವದಂತಿಗಳನ್ನ ಹಬ್ಬುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸೂಚನೆ ನೀಡಿದೆ.