alex Certify GOOD NEWS: ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಬಳಕೆಗೆ ಬರುವ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಬಳಕೆಗೆ ಬರುವ ಸಾಧ್ಯತೆ

ಟಾಟಾ ಮೆಡಿಕಲ್​ & ಡಯಾಗ್ನೋಸ್ಟಿಕ್ಸ್ ಭಾರತದಲ್ಲಿ ತನ್ನ ಕೋವಿಡ್​ 19 ಲಸಿಕೆಯನ್ನ ಲೋಕಾರ್ಪಣೆ ಮಾಡುವ ಸಲುವಾಗಿ ಮಾಡೆರ್ನಾ ಇಂಕ್​ ಜೊತೆ ಪ್ರಾಥಮಿಕ ಹಂತದ ಮಾತುಕತೆ ಶುರು ಮಾಡಿದೆ ಎಂದು ಎಕಾನಾಮಿಕ್​ ಟೈಮ್ಸ್ ವರದಿ ಮಾಡಿದೆ. 

ಭಾರತದಲ್ಲಿ ಮಾಡೆರ್ನಾ ಲಸಿಕೆ ಕ್ಲಿನಿಕಲ್​ ಪ್ರಯೋಗ ಪೂರ್ಣಗೊಳಿಸಲು ಟಾಟಾ ಮೆಡಿಕಲ್​ ಹಾಗೂ ಡಯಾಗ್ನೋಸ್ಟಿಕ್ಸ್ ಭಾರತದ ಕೌನ್ಸಿಲ್​ ಆಫ್​ ಸೈಂಟಿಫಿಕ್​ & ಇಂಡಸ್ಟ್ರಿಯಲ್​ ರಿಸರ್ಚ್​ ಜೊತೆ ಕೈ ಜೋಡಿಸಬಹುದು ಎನ್ನಲಾಗಿದೆ. ಈ ವಿಚಾರ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಎನ್ನಲಾಗಿದೆ.

ಫೈಜರ್​ ಲಸಿಕೆಯಂತಲ್ಲದೇ ಈ ಮಾಡೆರ್ನಾ ಲಸಿಕೆಯನ್ನ ಸಾಮಾನ್ಯ ಫ್ರಿಜ್​ ತಾಪಮಾನದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಹೀಗಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಇಂತಹ ಲಸಿಕೆಗಳು ಹೆಚ್ಚು ಸೂಕ್ತ ಎನಿಸಲಿವೆ. ಮಾಡೆರ್ನಾದ ಕೊನೆಯ ಹಂತದ ಅಧ್ಯಯನದ ಫಲಿತಾಂಶವು ನವೆಂಬರ್​ನಲ್ಲಿ ಪ್ರಕಟವಾಗಿದ್ದು 94.1 ಪ್ರತಿಶತದಷ್ಟು ಪರಿಣಾಮಕಾರತ್ವವನ್ನ ತೋರಿಸಿದೆ. ಭಾರತದಲ್ಲಿ ಪ್ರಸ್ತುತ ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನ ಬಳಕೆ ಮಾಡಲಾಗುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...