ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡ ಕೆಲವರಿಗೆ ಅಡ್ಡಪರಿಣಾಮ ಕಾಣಿಸಿಕೊಳ್ತಿದೆ. ಒಂದು ವೇಳೆ ಕೊರೊನಾ ಲಸಿಕೆ ಅಡ್ಡ ಪರಿಣಾಮದಿಂದ ಆಸ್ಪತ್ರೆ ಸೇರಿದ್ರೆ ಅದ್ರ ಬಿಲ್ಲನ್ನು ನೀವು ಆರೋಗ್ಯ ವಿಮೆ ಮೂಲಕ ಕ್ಲೇಮ್ ಮಾಡಬಹುದು. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಅಡ್ಡಪರಿಣಾಮ ಕಾಣಿಸಿಕೊಂಡು ಆಸ್ಪತ್ರೆ ಸೇರುವಂತಾದ್ರೆ ಅದು ಆರೋಗ್ಯ ವಿಮೆ ವ್ಯಾಪ್ತಿಗೆ ಬರುತ್ತದೆ ಎಂದು ಮೂಲಗಳು ಹೇಳಿವೆ.
ಎಲ್ಲ ವಿಮೆ ಕಂಪನಿಗಳು ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಮೂಲಕ ಐಆರ್ಡಿಎಐಗೆ ಸ್ಪಷ್ಟಪಡಿಸಿವೆ. ಎಲ್ಲ ವಿಮೆ ಕಂಪನಿಗಳು ಇದ್ರಲ್ಲಿ ಭಾಗಿಯಾಗಲಿವೆ. ಲಸಿಕೆ ಅಡ್ಡ ಪರಿಣಾಮದ ವೆಚ್ಛವನ್ನು ಇವು ಭರಿಸಲಿವೆ. ಆದ್ರೆ ಲಸಿಕೆ ಅನ್ವಯಿಸುವ ವೆಚ್ಚವನ್ನು ಇದು ಒಳಗೊಂಡಿರುವುದಿಲ್ಲ. ಆರೋಗ್ಯ ವಿಮೆ ಪ್ರಯೋಗ ಪಡೆಯಬೇಕೆಂದ್ರೆ ಪಾಲಿಸಿದಾರ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು.
ಅನೇಕ ಆರೋಗ್ಯ ಕಾರ್ಯಕರ್ತರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಲಸಿಕೆ ನಂತ್ರದ ಚಿಕಿತ್ಸೆ, ವಿಮೆ ವ್ಯಾಪ್ತಿಗೆ ಬರಲಿದೆಯಾ ಎಂದು ಪ್ರಶ್ನೆ ಮಾಡಿದ್ದರು. ಈವರೆಗೆ ದೇಶದಲ್ಲಿ 15.8 ಲಕ್ಷ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದ್ರಲ್ಲಿ 11 ಜನರನ್ನು ಮಾತ್ರ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.