ಈಗಿನ ಕಾಲದಲ್ಲಿ ಯಾವುದು ಕೂಡ ಶಾಶ್ವತವಾಗಿ ಬಾಳಿಕೆ ಬರುತ್ತೆ ಎಂದು ಗ್ಯಾರಂಟಿ ನೀಡೋಕೆ ಸಾಧ್ಯಾನೇ ಇಲ್ಲ. ಈ ಮಾತು ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳಿಗೂ ಅನ್ವಯಿಸುತ್ತೆ. ಮಾರ್ಚ್ ಬಳಿಕ ಹಳೆಯ 100, 10 ಹಾಗೂ 5 ರೂಪಾಯಿ ನೋಟುಗಳು ಬ್ಯಾನ್ ಆಗಲಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿದೆ. ಮಾರ್ಚ್ – ಏಪ್ರಿಲ್ ಬಳಿಕ ಹಳೆಯ ಎಲ್ಲಾ ನೋಟುಗಳು ಚಲಾವಣೆಯಲ್ಲಿ ಇರೋದಿಲ್ಲ ಎಂದು ಹೇಳಲಾಗ್ತಿದೆ. ಈ ವದಂತಿಗೆ ಸ್ವತಃ ಆರ್ಬಿಐ ಸ್ಪಷ್ಟನೆ ನೀಡಿದೆ.
ಆದರೆ ಆರ್ಬಿಐ ವೆಬ್ಸೈಟ್ನಲ್ಲಿ ಈ ಬಗ್ಗೆ ಯಾವುದೇ ವಿಚಾರವನ್ನ ಹೇಳಲಾಗಿಲ್ಲ. ಇನ್ನು ಈ ಬಗ್ಗೆ ಸ್ವತಃ ಆರ್ಬಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ರೀತಿಯ ಯಾವುದೇ ನಿರ್ಧಾರವನ್ನ ಕೈಗೊಳ್ಳಲಾಗಿಲ್ಲ. ಸದ್ಯ ಚಲಾವಣೆಯಲ್ಲಿ ಇರುವ ಹಳೆಯ ನೋಟುಗಳು ಬ್ಯಾನ್ ಆಗೋದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ನಾವು ಬ್ಯಾಂಕ್ಗಳಿಗೆ ಹಳೆಯ ಹಾಗೂ ಕೊಳೆಯಾದ ನೋಟುಗಳು ಬಂದರೆ ಮಾತ್ರ ನೀಡಬೇಡಿ ಎಂದು ಹೇಳಿದ್ದೆವು. ಎಲ್ಲಿಯೂ ಕೂಡ ಹಳೆಯ ನೋಟುಗಳು ಬ್ಯಾನ್ ಆಗಲಿವೆ ಎಂದು ಹೇಳಿಯೇ ಇಲ್ಲ. ನೋಟುಗಳನ್ನ ಬ್ಯಾನ್ ಮಾಡುವ ವಿಚಾರ ಸಧ್ಯಕ್ಕಂತೂ ಇಲ್ಲ. ನಾವು ನೀಡಿದ ಈ ಹೇಳಿಕೆಯನ್ನೇ ಯಾರೋ ತಿರುಚಿ ಇಂತಹ ವದಂತಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ .