ನವದೆಹಲಿ: ಕೊರೊನಾ ಲಾಕ್ಡೌನ್ ನಂತರ ರೈಲು ಸೇವೆ ಪುನಾರಂಭವಾಗಿದ್ದು, ಫೆಬ್ರವರಿಯಿಂದ ರೈಲುಗಳಲ್ಲಿ ಆಹಾರ ಸೌಲಭ್ಯ ಕಲ್ಪಿಸಲಾಗುತ್ತದೆ.
ಪ್ರಯಾಣಿಕರಿಗೆ ಇ – ಕ್ಯಾಟರಿಂಗ್ ಸೌಲಭ್ಯವನ್ನು ಕಲ್ಪಿಸಲು ರೈಲ್ವೆ ಸಚಿವಾಲಯ ಐ.ಆರ್.ಸಿ.ಟಿ.ಸಿ.ಗೆ ಅನುಮತಿ ನೀಡಿದೆ. ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುವ ಸಮಯದಲ್ಲಿ ಆಹಾರ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಆಯ್ದ ರೈಲ್ವೆ ನಿಲ್ದಾಣಗಳಿಂದ ಮಾತ್ರ ಈ ಸೌಲಭ್ಯ ಕಲ್ಪಿಸಲಾಗುವುದು.
10 ತಿಂಗಳ ಹಿಂದೆ ಕೊರೋನಾ ಲಾಕ್ಡೌನ್ ಘೋಷಣೆಯಾಗಿ ರೈಲು ಸಂಚಾರ ಬಂದ್ ಮಾಡಲಾಗಿತ್ತು. ನಂತರದಲ್ಲಿ ರೈಲು ಸೇವೆ ಆರಂಭವಾದರೂ ಇ -ಕ್ಯಾಟರಿಂಗ್ ಸೌಲಭ್ಯವಿರಲಿಲ್ಲ. ಇನ್ನು ಪ್ರಯಾಣಿಕರು ಆಹಾರಕ್ಕಾಗಿ ಹೊರಗೆ ಹೋಗಬೇಕಿಲ್ಲ. ತಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ ಎಂದು ಹೇಳಲಾಗಿದೆ.