ಅಗ್ಗದ ಯೋಜನೆಗಳನ್ನು ನೀಡುವುದ್ರಲ್ಲಿ ರಿಲಾಯ್ಸ್ ಜಿಯೋ ಮುಂದಿದೆ. ಗ್ರಾಹಕರಿಗೆ ಅನುಕೂಲವಾಗಲು ರಿಲಾಯನ್ಸ್ ಜಿಯೋ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ.
ಜಿಯೋ ಬಳಿ ಒಂದು ವರ್ಷದ ಕೆಲವು ಯೋಜನೆಗಳಿವೆ. ಒಮ್ಮೆ ರಿಚಾರ್ಜ್ ಮಾಡಿದ್ರೆ ಒಂದು ವರ್ಷ ಈ ಪ್ಲಾನ್ ಬಳಸಬಹುದು. 1299 ರೂಪಾಯಿ, 2,599 ರೂಪಾಯಿ, 2,399 ರೂಪಾಯಿ ಮತ್ತು 2121 ರೂಪಾಯಿ ಪ್ಲಾನ್ ಲಭ್ಯವಿದೆ.
ಈ ಎಲ್ಲ ಮೂರು ಪ್ಲಾನ್ ಗಳ ಸಿಂಧುತ್ವ 336 ರೂಪಾಯಿ. ಜಿಯೋ ವೆಬ್ಸೈಟ್ ನ ಇತರೆ ಭಾಗದಲ್ಲಿ ಈ ಪ್ಲಾನ್ ನಿಮಗೆ ಸಿಗಲಿದೆ. 1299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟೂ 24 ಜಿಬಿ ಡೇಟಾ ಲಭ್ಯವಾಗಲಿದೆ. ಕಂಪನಿ ನೀಡುವ ಹೈಸ್ಪೀಡ್ 24 ಜಿಬಿ ಖಾಲಿಯಾದ್ಮೇಲೆ ಅದ್ರ ವೇಗ 64 ಕೆಬಿಪಿಎಸ್ ಆಗಲಿದೆ.
ಜಿಯೋದ 1299 ರೂಪಾಯಿ ಪ್ಲಾನ್ ನಲ್ಲಿ 3600 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಜಿಯೋ ಅಪ್ಲಿಕೇಷನ್ ನ ಚಂದಾದಾರಿಕೆ ಸಹ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಕೂಡ ಲಭ್ಯವಾಗಲಿದೆ.