ಗುರುಗಾಂವ್ನ 56 ವರ್ಷದ ಆರೋಗ್ಯ ಸಿಬ್ಬಂದಿ ಕೋವಿಶೀಲ್ಡ್ ಲಸಿಕೆ ಪಡೆದ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಲಸಿಕೆ ಪಡೆದಿದ್ದ ಅವರು ಒಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮಹಿಳೆಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜವಂತಿ ಇಂದು ಬೆಳಗ್ಗೆ ನಿದ್ದೆಯಿಂದ ಏಳಲೇ ಇಲ್ಲ. ಹೀಗಾಗಿ ಅವರನ್ನ ಮೇದಾಂತಾ ಆಸ್ಪತ್ರೆಗೆ ತೆಗೆದುಕೊಂಡು ಹೋದೆವು. ಈ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ರು ಅಂತಾ ಕುಟುಂಬಸ್ಥರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕವೇ ರಾಜವಂತಿ ಸಾವಿಗೆ ಅಸಲಿ ಕಾರಣ ತಿಳಿದು ಬರಲಿದೆ. ಅಲ್ಲಿಯವರೆಗೆ ರಾಜವಂತಿ ಲಸಿಕೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲು ಆಗೋದಿಲ್ಲ ಎಂದು ಗುರುಗಾಂವ್ ಮುಖ್ಯ ಮೆಡಿಕಲ್ ಆಫೀಸರ್ ಡಾ. ವಿರೇಂದ್ರ ಯಾದವ್ ಹೇಳಿದ್ದಾರೆ .