ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಬೇಲ್ ಸಿಕ್ಕರೂ ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಬಿಡುಗಡೆ ಆದೇಶ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿ ಇಂದು ಕೂಡ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಎನ್.ಡಿ.ಪಿ.ಎಸ್. ಕೋರ್ಟ್ ಗೆ ತಲುಪಿಸಬೇಕು. ಎನ್.ಡಿ.ಪಿ.ಎಸ್. ಕೋರ್ಟ್ ಸೂಚಿಸಿದ ಶ್ಯೂರಿಟಿ ಒದಗಿಸಬೇಕು. ಬಳಿಕ ಕೋರ್ಟ್ ಬಿಡುಗಡೆ ಆದೇಶದ ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸಬೇಕು. ಅಂತಿಮವಾಗಿ ಜೈಲು ಅಧಿಕಾರಿಗಳು ರಾಗಿಣಿ ಅವರನ್ನು ಬಿಡುಗಡೆ ಮಾಡಲಿದ್ದಾರೆ.
ಜಾಮೀನು ಬಿಡುಗಡೆ ಆದೇಶದನ್ವಯ ಜೈಲಿನಿಂದ ರಾಗಿಣಿ ಅವರನ್ನು ಬಿಡುಗಡೆ ಮಾಡಲಾಗುವುದು. ನಾಳೆ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.