ಕೊರೊನಾ ವೈರಸ್ ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕರು ಚೇತರಿಸಿಕೊಂಡು ಮನೆಗೆ ಬಂದಿದ್ದಾರೆ. ಆದ್ರೆ ರಾಜಸ್ತಾನದ ಈ ಮಹಿಳೆ ವೈದ್ಯರಿಗೆ ಸವಾಲಾಗಿದ್ದಾಳೆ. ಕಳೆದ ಐದು ತಿಂಗಳಿಂದ ಕೊರೊನಾದಿಂದ ಬಳಲುತ್ತಿದ್ದಾಳೆ ಈಕೆ.
ಶಾರದಾ ದೇವಿಗೆ ಸೆಪ್ಟೆಂಬರ್ 4ರಂದು ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಕಳೆದ ಐದು ತಿಂಗಳಿಂದ 31 ಪರೀಕ್ಷೆ ನಡೆಸಲಾಗಿದೆ. ಎಲ್ಲ ಪರೀಕ್ಷಾ ವರದಿ ಸಕಾರಾತ್ಮಕವಾಗಿದೆ. ಇದ್ರಿಂದ ವೈದ್ಯರೂ ಕೂಡ ಅಚ್ಚರಿಗೊಳಗಾಗಿದ್ದಾರೆ. ಯಾವುದೇ ಚಿಕಿತ್ಸೆ ನೀಡಿದ್ರೂ ಫಲ ನೀಡ್ತಿಲ್ಲ. ಈಗ ಮಹಿಳೆ ವರದಿಯನ್ನು ಭರತ್ಪುರದಿಂದ ಜೈಪುರಕ್ಕೆ ಕಳುಹಿಸಲಾಗಿದೆ.
ಮಹಿಳೆ ಪಾಲಕರು ಸಾವನ್ನಪ್ಪಿದ್ದಾರೆ. ಗಂಡನ ಮನೆಯವರು ಹೊರ ಹಾಕಿದ್ದಾರೆ. ನಂತ್ರ ಶಾರದಾ ದೇವಿ ಆಶ್ರಮದಲ್ಲಿ ವಾಸವಾಗಿದ್ದಳಂತೆ. ಕೊರೊನಾ ಚಿಕಿತ್ಸೆಗಾಗಿ ಮಹಿಳೆಯನ್ನು ಜೈಪುರಕ್ಕೆ ಕಳುಹಿಸುವ ತಯಾರಿ ನಡೆಸಲಾಗಿದೆ. ಇನ್ನೊಂದು ಅಚ್ಚರಿ ವಿಷ್ಯವೆಂದ್ರೆ ಮಹಿಳೆ ಕೊರೊನಾ ವೈರಸ್ ಕಾಣಿಸಿಕೊಂಡ ಮೇಲೆ ಆಕೆ ತೂಕ ಹೆಚ್ಚಾಗ್ತಿದೆ.