ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಫಿಟ್ ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ವರ್ಕೌಟ್ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟಿ ತಮನ್ನಾ ಭಾಟಿಯಾ ಇದೀಗ ತಮ್ಮ ವರ್ಕೌಟ್ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಅವರ ಅಭಿಮಾನಿಗಳು ಫಿಟ್ ನೆಸ್ ಕ್ವೀನ್, ನೈಸ್ ಎಕ್ಸರ್ ಸೈಸ್, ಎಂದು ಹಲವಾರು ರೀತಿಯ ಕಮೆಂಟ್ಸ್ ಗಳನ್ನು ಮಾಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ 1 ಕೋಟಿ 20ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವ ತಮನ್ನಾ ತಮ್ಮ ಪ್ರತಿಯೊಂದು ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುವ ಮೂಲಕ ನೆಟ್ಟಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.
https://www.instagram.com/p/CKVM2_BBFnd/?utm_source=ig_web_copy_link