ಮಂಗಳೂರು: ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 100 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನು ಹಂತಹಂತವಾಗಿ ಹಿಂಪಡೆದು ಮಾರ್ಚ್ ವೇಳೆಗೆ ಸಂಪೂರ್ಣವಾಗಿ ರದ್ದು ಮಾಡುವ ಸಾಧ್ಯತೆ ಇದೆ.
ನೋಟ್ ಬ್ಯಾನ್ ಮಾಡುವುದಿಲ್ಲ. ಹೊಸ ನೋಟು ಚಲಾವಣೆ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುವುದು ಎಂದು ಆರ್.ಬಿ.ಐ. ಸಹಾಯಕ ಮಹಾಪ್ರಬಂಧಕ ಬಿ.ಎಂ. ಮಹೇಶ್ ತಿಳಿಸಿದ್ದಾರೆ.
ಜಿಲ್ಲಾ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದು, ಹಳೆಯ ನೋಟುಗಳು ಹೆಚ್ಚಾಗಿರುವ ಕಾರಣ 100 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ಪಡೆಯಲಾಗುವುದು. ಮಾರ್ಚ್ ಅಂತ್ಯಕ್ಕೆ ಸಂಪೂರ್ಣವಾಗಿ ಈ ನೋಟುಗಳನ್ನು ಹಿಂಪಡೆಯಲಾಗುವುದಿಲ್ಲ ತಿಳಿಸಿದ್ದಾರೆ. ಈ ನೋಟಗಳು ಕಳೆದ 6 ವರ್ಷಗಳಿಂದ ಮುದ್ರಣವಾಗುತ್ತಿಲ್ಲ. ಇದು ನೋಟು ಅಮಾನ್ಯೀಕರಣವಲ್ಲ, ಈ ನೋಟುಗಳನ್ನು ಹಿಂಪಡೆಯಲಾಗುವುದು. 100 ರೂ. ಮುಖಬೆಲೆಯ ಹೊಸ ನೋಟುಗಳು ಚಲಾವಣೆಯಲ್ಲಿರುತ್ತವೆ ಎಂದು ಹೇಳಿದ್ದಾರೆ.