ಭಾರತದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಇಂಡಿಯಾಾ, ಡೆಬಿಟ್ ಕಾರ್ಡ್ ಮೂಲಕ ವಿದೇಶದಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಪ್ಯಾನ್ ಕಾರ್ಡ್ ಮಾಹಿತಿಯನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದೀರಾ..? ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಮಾಹಿತಿಯನ್ನ ಅಪ್ಡೇಟ್ ಮಾಡಿ. ಹಾಗೂ ಯಾವುದೇ ಅಡಚಣೆಯಿಲ್ಲದ ಅಂತಾರಾಷ್ಟ್ರೀಯ ವ್ಯವಹಾರ ನಡೆಸಿ ಎಂದು ಎಸ್ಬಿಐ ಟ್ವೀಟ್ ಮಾಡಿದೆ.
ನೀವು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಪ್ಯಾನ್ ಕಾರ್ಡ್ ಸಂಖ್ಯೆಯನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದಾಗಿದೆ. ಪಾನ್ ಕಾರ್ಡ್ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದ್ರ ಬಗ್ಗೆ ಇಲ್ಲಿದೆ ಮಾಹಿತಿ.
1. ಎಸ್ಬಿಐ ವೆಬ್ಸೈಟ್ನಲ್ಲಿ ಲಾಗಿನ್ ಆಗಿ. (www.onlinesbi.com)
2. ಮೈ ಅಕೌಂಟ್ & ಪ್ರೊಫೈಲ್ ಟ್ಯಾಬ್ಗೆ ಹೋಗಿ ಪ್ರೊಫೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
3.ಪ್ರೊಫೈಲ್ ಆಯ್ಕೆಯಡಿಯಲ್ಲಿ ಇರುವ ಪ್ಯಾನ್ ರಿಜಿಸ್ಟ್ರೇಷನ್ ಆಯ್ಕೆಯನ್ನ ಒತ್ತಿರಿ.
4 . ಪ್ರೊಫೈಲ್ ಪಾಸ್ ವರ್ಡ್ ನೋಂದಾಯಿಸಿ.
5. ಅಲ್ಲಿ ಕಾಣಸಿಗುವ ಬಾಕ್ಸ್ನಲ್ಲಿ ಪಾನ್ ನಂಬರ್ ಟೈಪ್ ಮಡಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಪಾನ್ಕಾರ್ಡ್ ನೋಂದಾಯಿಸಿದ 7 ದಿನಗಳ ಒಳಗಾಗಿ ಎಸ್ಬಿಐ ನಿಮಗೆ ದೃಢೀಕರಣ ಸಂದೇಶವನ್ನ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಿದೆ.