ಚಳಿಗಾಲ ಬಂತು ಅಂದ್ರೆ ಸಾಕು ಚರ್ಮ ಹಾಗೂ ದೈಹಿಕ ಆರೋಗ್ಯದ ಮೇಲೆ ಬಲವಾದ ಪರಿಣಾಮವನ್ನ ಬೀರುತ್ತೆ. ಈಗಂತೂ ವರ್ಕ್ ಫ್ರಮ್ ಹೋಂ ಇರೋದ್ರಿಂದ ದೇಹ ದಂಡನೆ ಮಾಡೋಕೆ ಅವಕಾಶವೇ ಇಲ್ಲದಂತಾಗಿದೆ. ಆದರೆ ಮನೆಯಲ್ಲೇ ಕುಳಿತು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ತೂಕದಲ್ಲಿ ಏರಿಕೆ, ಸಂಧುಗಳಲ್ಲಿ ಸಮಸ್ಯೆ, ವಿಟಾಮಿನ್ ಡಿ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆ ಉಂಟಾಗುತ್ತೆ ಅಂತಾರೆ ಆಹಾರ ತಜ್ಞರು.
ಇನ್ನು ಒಣ ಚರ್ಮದ ಸಮಸ್ಯೆ, ಕೂದಲು ಉದುರುವಿಕೆ ಕೂಡ ಚಳಿಗಾಲದ ದೊಡ್ಡ ಸಮಸ್ಯೆಗಳಲ್ಲೊಂದು. ಆದರೆ ಚಳಿಗಾಲದಲ್ಲಿ ಆಹಾರ ಕ್ರಮದಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನ ತರೋದ್ರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಬೆಳ್ಳುಳ್ಳಿ : ನೀವೆನಾದರೂ ಬೆಳ್ಳುಳ್ಳಿ ಪ್ರಿಯರಾಗಿದ್ದರೆ ಇದನ್ನ ಸೇವಿಸೋಕೆ ಚಳಿಗಾಲ ಸರಿಯಾದ ಸಮಯವಾಗಿದೆ. ಬೆಳ್ಳುಳ್ಳಿ ಸಲೆನಿಯಂ, ಜರ್ಮೇನಿಯಂ ಹಾಗೂ ಸಲ್ಪೈಡ್ರಲ್ ಅಮಿನೋ ಆಸಿಡ್ಗಳ ಆಗರವಾಗಿದೆ. ಇದರಿಂದ ದೇಹದಲ್ಲಿ ಇಮ್ಯೂನಿಟಿ ಕೂಡ ಹೆಚ್ಚಾಗಲಿದೆ.
ಚಕ್ಕೆ : ಎಲ್ಲರ ಮನೆಯ ಅಡುಗೆ ಕೋಣೆಯಲ್ಲಿ ಈ ಪದಾರ್ಥ ಇದ್ದೇ ಇರುತ್ತೆ. ಚಕ್ಕೆಯಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿ ಇರುತ್ತೆ. ಅಲ್ಲದೇ ದೇಹದಲ್ಲಿ ಕೆಂಪು ರಕ್ತ ಕಣವನ್ನ ಹೆಚ್ಚಿಸೋಕೂ ಈ ಪದಾರ್ಥ ತುಂಬಾನೇ ಸಹಕಾರಿ. ಅಲ್ಲದೇ ದೇಹದಲ್ಲಿ ಡಯಾಬಿಟೀಸ್ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಇದನ್ನ ಬೆಳಗ್ಗೆ ನಿಮ್ಮ ಕಾಫಿ ಇಲ್ಲವೇ ಚಹದಲ್ಲಿ ಸೇರಿಸೋದ್ರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ.
ಗೆಣಸು : ಗೆಣಸಿನಲ್ಲಿ ಫೈಬರ್, ವಿಟಾಮಿನ್ ಎ, ಪೋಟಾಶಿಯಂ ಅಗಾಧ ಪ್ರಮಾಣದಲ್ಲಿ ಇರುತ್ತೆ. ನೀವೇನಾದರೂ ಕ್ಯಾಲೋರಿ ಕರಗಿಸಿ ಪೋಷಕಾಂಶ ಹೆಚ್ಚಿಸುವ ಪದಾರ್ಥದ ಹುಡುಕಾಟದಲ್ಲಿದ್ದರೆ ಇದಕ್ಕೆ ಸರಿಯಾದ ಉತ್ತರ ಗೆಣಸು. ಮಲಬದ್ಧತೆಯನ್ನ ಕಡಿಮೆ ಮಾಡಿ ಇಮ್ಯೂನಿಟಿ ಪ್ರಮಾಣ ಕೂಡ ಗೆಣಸಿನಿಂದ ಹೆಚ್ಚಲಿದೆ.
ಪಾಲಾಕ್ ಸೊಪ್ಪು: ಯಾವುದಾದರೂ ಸೊಪ್ಪಿನಿಂದ ನಿಮಗೆ ಎಲ್ಲಾ ಬಗೆಯ ಪೋಷಕಾಂಶ ಸಿಗಬೇಕು ಅಂದರೆ ಪಾಲಾಕ್ ಸೊಪ್ಪಿಗಿಂತ ಒಳ್ಳೆಯ ಆಯ್ಕೆ ಮತ್ತೊಂದಿಲ್ಲ. ಈ ಸೊಪ್ಪಿನಲ್ಲಿ ಚಳಿಗಾಲದಲ್ಲಿ ಬಹುಮುಖ್ಯವಾಗಿ ಬೇಕಾದ ಫೈಬರ್, ವಿಟಾಮಿನ್ ಸಿ ಹೇರಳವಾಗಿ ಸಿಗಲಿದೆ. ಅದು ಮಾತ್ರವಲ್ಲದೇ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡೋದ್ರ ಜೊತೆಗೆ ಲಿವರ್ನ ಆರೋಗ್ಯಕ್ಕೂ ಪಾಲಕ್ ಬಹಳವೇ ಸಹಕಾರಿ .
ಇಷ್ಟು ಮಾತ್ರವಲ್ಲದೇ ಕಿತ್ತಳೆ, ದ್ರಾಕ್ಷಿ, ನಿಂಬು, ಸೊಯಾಬಿನ್, ಹಸಿರು ಬಟಾಣಿಗಳು ಕೂಡ ನಿಮ್ಮ ಆರೋಗ್ಯವನ್ನ ಉತ್ತಮ ಮಾಡೋದ್ರ ಜೊತೆಗೆ ಚರ್ಮದ ಕಾಂತಿಯನ್ನ ಕಾಪಾಡೋಕೂ ತುಂಬಾನೇ ಸಹಕಾರಿ.