ಕೊರೊನಾ ಕಾರಣದಿಂದಾಗಿ ಎಲ್ಲ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿವೆ. ಮಕ್ಕಳು ಮನೆಯಲ್ಲಿಯೇ ಕುಳಿತು ಆನ್ಲೈನ್ ಕ್ಲಾಸ್ ಕೇಳ್ತಿದ್ದಾರೆ. ಆದ್ರೆ ಎಷ್ಟು ಮಕ್ಕಳಿಗೆ ಈ ಪಾಠ ಅರ್ಥವಾಗ್ತಿದೆ ಎಂಬುದನ್ನು ಹೇಳೋದು ಕಷ್ಟ. ಸ್ನೇಹಿತರ ಜೊತೆ ಆಟವಾಡ್ತ ಪಾಠ ಕಲಿಯುತ್ತಿದ್ದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಶಿಕ್ಷೆ ರೀತಿಯಾಗಿದೆ. ಕೆಲ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಕಿರಿಕಿರಿ ನೀಡ್ತಿದೆ. ಇದಕ್ಕೆ ಗುಜರಾತ್ ನ ಸೂರತ್ ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ.
ಸೂರತ್ ನ ತಂಬಾಕು ಮಾರಾಟಗಾರನ ಮಗ 14 ವರ್ಷದ ಬಾಲಕ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮನೆಯಿಂದ 280 ಕಿಲೋಮೀಟರ್ ದೂರ ಹೋಗಿದ್ದಾನೆ. ಮುಂಬೈ ಸಮೀಪಕ್ಕೆ ಹೋಗಿದ್ದ ಬಾಲಕನನ್ನು ಪೊಲೀಸರು ಪತ್ತೆ ಮಾಡಿ ಕುಟುಂಬಸ್ಥರಿಗೆ ನೀಡಿದ್ದಾರೆ. ಮೊಬೈಲ್ ನಲ್ಲಿ ಶಾಲೆಯ ಪಾಠ ಕೇಳಿ ಹಾಗೂ ಹೋಂ ವರ್ಕ್ ಮಾಡಿ ಸುಸ್ತಾಗಿದ್ದೇನೆಂದು ಬಾಲಕ ನೋಟ್ ಬರೆದಿಟ್ಟು ಮನೆ ಬಿಟ್ಟಿದ್ದ.
ಬಾಲಕ 20 ಕಿಲೋಮೀಟರ್ ಸೈಕಲ್ ನಲ್ಲಿ ಹೋಗಿ ನಂತ್ರ ಲಾರಿ ಮೂಲಕ ಸ್ವಲ್ಪ ದೂರ ಹೋಗಿದ್ದಾನೆ. ಮತ್ತೆ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿದ್ದಾನೆ. ನೀರಿನ ಬಾಟಲ್, ಸೈಕಲ್ ಬಿಟ್ರೆ ಆತನ ಬಳಿ ಮತ್ತೇನು ಇರಲಿಲ್ಲ. ಸೋಮವಾರ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.