ಅಮೆರಿಕ ಕ್ಯಾಪಿಟೋಲ್ನಲ್ಲಿ ನಡೆದ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ರ ಐತಿಹಾಸಿಕ ಪದಗ್ರಹಣ ಕಾರ್ಯಕ್ರಮಕ್ಕೆ ಅಮೆರಿಕದ ಭಾರತೀಯ ರಾಯಭಾರಿ ತರಣ್ಜೀತ್ ಸಿಂಗ್ ಸಂಧು ಸಾಕ್ಷಿಯಾಗಿದ್ದಾರೆ.
ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಲು ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ರ ಆಡಳಿತದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಪದಗ್ರಹಣ ಸಮಾರಂಭದ ಬಳಿಕ ಸಂಧು ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕದ ನಡುವಿನ ಪ್ರಜಾಪ್ರಭುತ್ವ ಮೌಲ್ಯ, ಕಾನೂನು ಹಂಚಿಕೆ ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ರೋಮಾಂಚನಕಾರಿ ಸಹಭಾಗಿತ್ವಕ್ಕೆ ಭದ್ರ ಅಡಿಪಾಯವನ್ನು ಹಾಕಲಿದೆ ಎಂದು ನಾನು ನಂಬಿದ್ದೇನೆ ಎಂತಲೂ ಅವರು ಹೇಳಿದ್ರು.
ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ರ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಭಾರತವನ್ನ ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನಿ ಮೋದಿ, ಬಿಡೆನ್ ಹಾಗೂ ಹ್ಯಾರಿಸ್ ಅವರಿಗೆ ಟ್ವಿಟರ್ ಮೂಲಕ ಶುಭಾಶಯ ಸಲ್ಲಿಸಿದ್ದಾರೆ ಎಂದೂ ಸಂಧು ಹೇಳಿದ್ರು.