ಚಳಿಗಾಲದಲ್ಲಿ ಸ್ನಾನ ಮಾಡಲು ಸೋಂಬೇರಿತನ ಎನ್ನುವ ಮಂದಿ ಅಮ್ಮಮ್ಮಾ ಅಂದ್ರೂ ಅದೆಷ್ಟು ದಿನ ಸ್ನಾನ ಮಾಡದೇ ಇರಬಹುದು..? ಒಂದು ವಾರ…? ಹತ್ತು ದಿನ…?
ಇರಾನಿನ ಅಮೌ ಹಾಜಿ ಎಂಬ 87 ವರ್ಷದ ಈ ವ್ಯಕ್ತಿ ಕಳೆದ 67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ…! ದಕ್ಷಿಣ ಇರಾನ್ನ ಡೇಜ್ಗಾ ಗ್ರಾಮನ ಈ ವ್ಯಕ್ತಿ ಅದಾಗ ತಾನೇ ಚಿಮ್ನಿಯಿಂದ ಬಿದ್ದಿರುವ ಬಿಬ್ಲಿಕಲ್ ಮೋಸೆಸ್ ರೀತಿ ಕಾಣುತ್ತಾರೆ. ಬೂದಿ ಹಾಗೂ ಧೂಳಿನಿಂದ ಈತನ ಮೈ ಮುಚ್ಚಿ ಹೋಗಿದ್ದು, ಆತ ಮನುಷ್ಯನೋ ಇಲ್ಲ ಪ್ರತಿಮೆಯೋ ಎಂಬ ಅನುಮಾನ ಮೂಡುತ್ತದೆ.
ನೀರನ್ನು ಕಂಡರೆ ಭಯ ಇರುವ ಕಾರಣ ಈತ ಕಳೆದ 67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ. ಸ್ನಾನ ಮಾಡಿದಲ್ಲಿ ಹುಷಾರು ತಪ್ಪುವ ಭಯ ಈತನದು.
ಸತ್ತ ಪ್ರಾಣಿಗಳ ದೇಹದ ಕೊಳೆತ ಮಾಂಸ ಈತನ ಮೆಚ್ಚಿನ ಆಹಾರವಾಗಿದೆ. ಪ್ರಾಣಿಗಳ ಮಲವನ್ನು ಒಣಗಿಸಿ, ಪೈಪ್ ಒಂದರಲ್ಲಿ ಹಾಕಿಕೊಂಡು ಹೊಗೆ ಎಳೆಯುವುದು ಈತನ ಇನ್ನೊಂದು ಮೆಚ್ಚಿನ ಕೆಲಸ.