ಪ್ರಸಿದ್ಧ ಅನ್ ಲೈನ್ ಶಾಪಿಂಗ್ ಆಪ್ ಅಮೆಜಾನ್ ನಲ್ಲಿ ಈಗ ಎಲ್ಲವೂ ಸಿಗುತ್ತದೆ. ಆಕಳ ಸೆಗಣಿಯ ಕೇಕ್ ಕೂಡ ದೊರೆಯಲಾರಂಭಿಸಿದೆ. ಆದರೆ, ಅದನ್ನು ತಿಂದ ವ್ಯಕ್ತಿಯೊಬ್ಬನ ಕುತೂಹಲಕಾರಿ ಪ್ರತಿಕ್ರಿಯೆ ಇಲ್ಲಿದೆ.
ಹವನ ಪೂಜೆಗಳಿಗಾಗಿ ಭಾರತೀಯ ಹಸುವಿನ ಸೆಗಣಿಯಿಂದ ಮಾಡಿದ ಕೇಕ್ ಗಳನ್ನು ಅಮೆಜಾನ್ 199 ರೂ.ಗೆ ಮಾರಾಟ ಮಾಡುತ್ತಿದೆ. ಇದು ಸಂಪೂರ್ಣ ಒಣಗಿಸಿದ್ದು, ಹುಳುಗಳನ್ನು ತೆಗೆಯಲಾಗಿದೆ ಎಂದು ಡಿಸ್ಕ್ರಿಪ್ಶನ್ ನಲ್ಲಿ ಬರೆಯಲಾಗಿದೆ. ಇದನ್ನು ಖರೀದಿಸಿದ ವ್ಯಕ್ತಿಯೊಬ್ಬ ಅದರ ಬಗ್ಗೆ ಕಮೆಂಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
“ಕೇಕ್ ಅತಿ ಕೆಟ್ಟ ರುಚಿ ಹೊಂದಿದೆ. ತಿಂದ ನನಗೆ ಲೂಸ್ ಮೋಶನ್ ಶುರುವಾಯಿತು. ತಯಾರು ಮಾಡುವಾಗ ಒಂದಿಷ್ಟು ಹೈಜೆನಿಕ್ ಕಾಪಾಡಿ” ಎಂದು ಬರೆದಿದ್ದಾನೆ.
ಡಾ. ಸಂಜಯ ಅರೋರಾ ಎಂಬವರು ಸೆಗಣಿ ಕೇಕ್ ಬಗ್ಗೆ ಅಮೆಜಾನ್ ಡಿಸ್ ಕ್ರಿಪ್ಶನ್ ಹಾಗೂ ಖರೀದಿ ಮಾಡಿದ ವ್ಯಕ್ತಿಯ ಕಮೆಂಟ್ ಗಳನ್ನು ಸ್ಕ್ರೀನ್ ಶಾಟ್ ಮಾಡಿ ಟ್ವೀಟ್ ಮಾಡಿದ್ದಾರೆ. “ಇದು ನನ್ನ ಭಾರತ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ” ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ.
https://twitter.com/MdGulamSarwarK1/status/1351862699399909377?ref_src=twsrc%5Etfw%7Ctwcamp%5Etweetembed%7Ctwterm%5E1351862699399909377%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Famazon-customer-eats-cow-dung-cakes-posts-review-on-site-bizarre-viral-story-1761097-2021-01-20