ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟಿದೆ.
ಕೊರೋನಾ ಸಂಕಷ್ಟದ ನಡುವೆ ಷೇರುಪೇಟೆ ಸೂಚ್ಯಂಕ ದಾಖಲೆ ಬರೆದಿದ್ದು, 50.096 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಮೋದಿ 2019 ರಲ್ಲಿ ಅಧಿಕಾರಕ್ಕೇರಿದಾಗ ಸೂಚ್ಯಂಕ 38,000 ಕ್ಕೆ ಏರಿಕೆಯಾಗಿತ್ತು. ಈಗ ಕೋವಿಡ್ ಪರಿಣಾಮದ ಮಧ್ಯೆ ಷೇರುಪೇಟೆ ಹೊಸ ದಾಖಲೆ ಬರೆದಿದೆ ಎಂದು ಹೇಳಲಾಗಿದೆ.
ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸೆನ್ಸೆಕ್ಸ್ 50 ಸಾವಿರ ಗಡಿ ದಾಟಿದ್ದು, ನಿಫ್ಟಿ ಸಹ ದಾಖಲೆಯ 14,700 ಅಂಕಗಳಿಗಿಂತ ಹೆಚ್ಚಾಗಿದೆ.