alex Certify ಕಮಲಾ ಹ್ಯಾರಿಸ್​ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ತಮಿಳುನಾಡಿನಲ್ಲಿ ಸಂಭ್ರಮವೋ ಸಂಭ್ರಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲಾ ಹ್ಯಾರಿಸ್​ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ತಮಿಳುನಾಡಿನಲ್ಲಿ ಸಂಭ್ರಮವೋ ಸಂಭ್ರಮ….!

ಅಮೆರಿಕದ ಉಪಾಧ್ಯಕ್ಷೆಯಾಗಿ ಇಂದು ಅಧಿಕಾರ ಅಧಿಕಾರ ಸ್ವೀಕಾರ ಮಾಡಲಿರುವ ಕಮಲಾ ಹ್ಯಾರಿಸ್​​ ಅಮೆರಿಕ ರಾಜಕೀಯ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈ ನಡುವೆ ಕಮಲಾ ಹ್ಯಾರಿಸ್​ ಪೂರ್ವಜರು ತಮಿಳುನಾಡಿನಲ್ಲಿ ವಾಸವಿದ್ದರು ಎನ್ನಲಾದ ತುಳಸಿಪುರಂ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಕಮಲಾ ಹ್ಯಾರಿಸ್​ ಚುನಾವಣಾ ಪ್ರಚಾರದ ದಿನದಿಂದ ಹಿಡಿದು ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವವರೆಗೂ ಒಂದಿಲ್ಲೊಂದು ಕಾರಣದಿಂದ ತುಳಸಿಪುರಂ ಗ್ರಾಮ ಸುದ್ದಿಯಾಗುತ್ತಲೇ ಇದೆ. ಇದೀಗ ಕಮಲಾ ಹ್ಯಾರಿಸ್​ ಅಧಿಕಾರ ಸ್ವೀಕಾರಕ್ಕೆ ಕೌಂಟ್​ಡೌನ್​ ಶುರುವಾಗಿರೋದ್ರಿಂದ ಗ್ರಾಮದ ತುಂಬೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.

ಇಷ್ಟು ಮಾತ್ರವಲ್ಲದೇ ಗ್ರಾಮದ ರಸ್ತೆಗಳು ಹಾಗೂ ದೇವಾಲಯಗಳನ್ನ ಸ್ವಚ್ಛಗೊಳಿಸಿ ಕಮಲಾ ಹ್ಯಾರಿಸ್​ ಹೆಸರಿನಲ್ಲಿ ವಿಶೇಷ ಪೂಜಾ ಕಾರ್ಯಗಳನ್ನ ನೆರವೇರಿಸಲಾಗಿದೆ. ಇದು ಮಾತ್ರವಲ್ಲದೇ ಪದಗ್ರಹಣ ಕಾರ್ಯಕ್ರಮದ ವೇಳೆ ಸಂಪೂರ್ಣ ಗ್ರಾಮಕ್ಕೇ ಸಿಹಿ ಹಂಚುವ ಸಲುವಾಗಿ ತಮಿಳುನಾಡಿನ ಸಾಂಪ್ರದಾಯಿಕ ಮುರುಕ್ಕು ತಿಂಡಿಯನ್ನ ತಯಾರಿಸಲಾಗಿದೆ.

ಕಮಲಾ ಹ್ಯಾರಿಸ್​​ ಅಮೆರಿಕದ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕಮಲಾ ಹ್ಯಾರಿಸ್​ ತಾಯಿ – ತಂದೆ ತುಳಸಿಪುರಂ ಗ್ರಾಮದ ನಿವಾಸಿಯಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...