ಕೇವಲ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಅಸ್ಸಾಂನಲ್ಲಿ ಸತತ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲ ಎಂದು ಚಹಾ ಬುಡಕಟ್ಟು ಕಲ್ಯಾಣ ಸಚಿವ ಸಂಜಯ್ ಕಿಶನ್ ಹೇಳಿದ್ದಾರೆ. ಚಹಾ ಕಾರ್ಮಿಕರ ದೈನಂದಿನ ವೇತನವನ್ನ 351 ರೂಪಾಯಿ ಹೆಚ್ಚಿಸಿದ ಬಳಿಕ ಸಂಜಯ್ ಕಿಶನ್ ಈ ಹೇಳಿಕೆ ನೀಡಿದ್ದಾರೆ.
ಕರುಣಾಜನಕ ಸ್ಥಿತಿಯಲ್ಲಿದ್ದ ರಸ್ತೆಗಳನ್ನ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 548 ಕೋಟಿ ರೂಪಾಯಿ ಖರ್ಚು ಮಾಡಿ 625 ಕಿಲೋಮೀಟರ್ ರಸ್ತೆಯನ್ನ ನಿರ್ಮಾಣ ಮಾಡಿದೆ. ಅಲ್ಲದೇ ಪ್ರಸ್ತುತ 250 ಕಿಲೋಮೀಟರ್ ರಸ್ತೆ ನಿರ್ಮಾಣ ಹಂತದಲ್ಲಿದೆ. ಚಹಾ ತೋಟಗಳಲ್ಲಿನ 150 ಆರೋಗ್ಯ ಕೇಂದ್ರಗಳನ್ನ ಆಸ್ಪತ್ರೆಗಳಾಗಿ ನವೀಕರಿಸಲಾಗಿದೆ. ಗರ್ಭಿಣಿ ಚಹಾ ಕಾರ್ಮಿಕರಿಗೆ ವಿಶೇಷ ವೇತನ ಯೋಜನೆಯನ್ನೂ ಆರಂಭಿಸಿದ್ದೇವೆ.
ಆದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯದ ಚಹಾ ತೋಟಗಳು ಕರುಣಾಜನಕ ಸ್ಥಿತಿಯಲ್ಲಿ ಇದ್ದವು. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಅಷ್ಟು ಮಾತ್ರವಲ್ಲದೇ ಪಡಿತರ ಕಾರ್ಡ್ ಮೂಲಕ ಫಲಾನಭವಿಗಳು ಉಚಿತ ಅಕ್ಕಿಯನ್ನ ಪಡೆಯುತ್ತಿದ್ದಾರೆ. 119 ಪ್ರಾಥಮಿಕ ಶಾಲೆಗಳು ನವೀಕರಣಗೊಂಡಿವೆ. ಇವೆಲ್ಲವನ್ನ ಬಿಜೆಪಿ ಸರ್ಕಾರ ಕೇವಲ 5 ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸಿದೆ ಎಂದು ಹೇಳಿದ್ರು.