ಚಲನಚಿತ್ರ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ನಟಿ ಶೆರ್ಲಿನ್ ಚೋಪ್ರಾ, ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಶೆರ್ಲಿನ್ ತನ್ನ ನೋವು ತೋಡಿಕೊಂಡಿದ್ದಾಳೆ. ಆರು ವರ್ಷಗಳ ಹಿಂದೆ ಸಾಜಿದ್ ಭೇಟಿ ಮಾಡಿದ್ದ ಶೆರ್ಲಿನ್ ಗೆ ಕೆಟ್ಟ ಅನುಭವವಾಗಿತ್ತಂತೆ.
ತಂದೆ ಸಾವನ್ನಪ್ಪಿದ ಕೆಲ ದಿನಗಳ ನಂತ್ರ 2015ರಲ್ಲಿ ಶೆರ್ಲಿನ್, ಸಾಜಿದ್ ಖಾನ್ ಭೇಟಿಯಾಗಿದ್ದಳಂತೆ. ಈ ವೇಳೆ ಪ್ಯಾಂಟ್ ನಿಂದ ಖಾಸಗಿ ಅಂಗ ಹೊರತೆಗೆದ ಸಾಜಿದ್, ಇದ್ರ ಮೇಲೆ ಸಿನಿಮಾ ಮಾಡು ಎಂದಿದ್ದನಂತೆ. ಖಾಸಗಿ ಅಂಗ ಹೇಗಿರುತ್ತದೆ ಎಂಬುದು ನನಗೆ ಗೊತ್ತು. ನನ್ನ ಉದ್ದೇಶ ಅದಲ್ಲವೆಂದು ಶೆರ್ಲಿನ್ ಹೇಳಿದ್ದಳಂತೆ. ಇದನ್ನು ಟ್ವೀಟರ್ ನಲ್ಲಿ ಶೆರ್ಲಿನ್ ಬರೆದುಕೊಂಡಿದ್ದಾಳೆ.
ಇಷ್ಟೇ ಅಲ್ಲ ನಟಿ ಜಿಯಾ ಖಾನ್ ಸಹೋದರಿ ಕರಿಷ್ಮಾ ಕೂಡ ಸಾಜಿದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ನಿರ್ದೇಶಕ ಸಾಜಿದ್ ಖಾನ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಕರಿಷ್ಮಾ,ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ. ಈ ಹಿಂದೆಯೂ ಸಾಜಿದ್ ಖಾನ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಸಾಜಿದ್ ಮೇಲೆ ಆರೋಪ ಮಾಡಿದ 7ನೇ ಮಹಿಳೆ ಕರಿಷ್ಮಾ. ಈಗ ಶೆರ್ಲಿನ್ ಹೆಸರು ಈ ಪಟ್ಟಿಯಲ್ಲಿ ಸೇರಿದೆ.