ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್ ಅಲೆ ಶುರುವಾಗಿದ್ದು ಸೋಂಕು ನಿಯಂತ್ರಣಕ್ಕೆ ಚೀನಾದ ಅಧಿಕಾರಿಗಳು ವಿವಿಧ ಮಹತ್ವದ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ, ಬೀಜಿಂಗ್ನ ಮಾರ್ಗಗಳನ್ನ ಬಂದ್ ಮಾಡಲಾಗಿದ್ದು ಡಿಸೆಂಬರ್ 10ರಿಂದ ಬೀಜಿಂಗ್ಗೆ ವಿದೇಶದಿಂದ ಬಂದ ಪ್ರತಿಯೊಬ್ಬರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಮಂಗಳವಾರ ಚೀನಾದಲ್ಲಿ 118 ಹೊಸ ಕೊರೊನಾ ಕೇಸ್ಗಳು ವರದಿಯಾಗಿವೆ. ಇದರಲ್ಲಿ ಬೀಜಿಂಗ್ನ ಸಮೀಪವೇ ಇರುವ ಹೆಬಿಯಲ್ಲಿ 19 ಹೊಸ ಕೊರೊನಾ ಪ್ರಕರಣಗಳು ಹಾಗೂ ಬೀಜಿಂಗ್ 7 ಕೊರೊನಾ ಕೇಸ್ಗಳು ಸೇರಿವೆ.
ಹೈಲೋಂಗ್ಜಿಯಾಂಗ್ನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಮ್, ಕಾಫಿ ಶಾಪ್ ಹಾಗೂ ಧಾರ್ಮಿಕ ಕೇಂದ್ರಗಳನ್ನ ಬಂದ್ ಮಾಡಲಾಗಿದೆ.
ಕೊರೊನಾ ವಿರುದ್ಧ ಹೋರಾಡೋಕೆ ಚೀನಾ ಸ್ಥಳೀಯ ನೀತಿಯನ್ನ ಅನುಸರಿಸುತ್ತಿದೆ. ಹೆಬೀಯಲ್ಲಿ ಅಧಿಕಾರಿಗಳು ಒಂದು ಹಳ್ಳಿ, ಒಂದು ನೀತಿ ಎಂಬ ತತ್ವದ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಮೂಲಕ ಕೊರೊನಾ ವೈರಸ್ ನಿಯಂತ್ರಣ ಮಾಡಲು ಪ್ರಯತ್ನ ಪಡ್ತಿದ್ದಾರೆ.
ಕಿಕಿಹಾರ್ ಎಂಬಲ್ಲಿ ಅಧಿಕಾರಿಗಳು ನಿವಾಸಿಗಳಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೊರೊನಾ ಸೋಂಕು ಕಂಡು ಬಂದ ಮನೆಗಳನ್ನ ಸೀಲ್ಡೌನ್ ಮಾಡಲಾಗ್ತಿದೆ. ಚೀನಾದಲ್ಲಿ ಒಟ್ಟು 88,557 ಕೊರೊನಾ ಕೇಸ್ಗಳು ದಾಖಲಾಗಿದ್ದು ಈವರೆಗೆ ಒಟ್ಟು 4635 ಮಂದಿ ಸಾವನ್ನಪ್ಪಿದ್ದಾರೆ .