ರಿಲೇಶನ್‌ಶಿಪ್‌ಗಳ ಆಯಾಮಗಳನ್ನೇ ಈ ಡೇಟಿಂಗ್ ಅಪ್ಲಿಕೇಶನ್‌ಗಳು ಸೃಷ್ಟಿಸಿಬಿಟ್ಟಿವೆ. ಕೇವಲ ಸ್ಮಾರ್ಟ್‌ಫೋನ್ ಅನ್ನು ಒಂದೆರಡು ಟಚ್‌ಗಳನ್ನು ಮಾಡುವ ಮೂಲಕ ಸೆಕೆಂಡ್‌ಗಳ ಅವಧಿಯಲ್ಲಿ ಪುರುಷ – ಮಹಿಳೆಯ ನಡುವೆ ಸಲಿಗೆ ಬೆಳೆದು ಸಂಬಂಧಕ್ಕೂ ತಿರುಗುವ ಕಾಲ ಇದು.
ಆದರೆ ಕೆಲವೊಮ್ಮೆ ಡೇಟಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಎಡವಟ್ಟುಗಳನ್ನು ಸೃಷ್ಟಿಸಿಬಿಡುತ್ತವೆ.
ಡೇಟಿಂಗ್ ಅಪ್ಲಿಕೇಶನ್ ಒಂದರಲ್ಲಿ ಮೂರು ಮೊಮ್ಮಕ್ಕಳಿರುವ ಅಜ್ಜಿಯೊಬ್ಬರು ತಮ್ಮ ವಯಸ್ಸನ್ನು ಸಾಕಷ್ಟು ಕಡಿಮೆ ತೋರಿಸಿಕೊಂಡು ತನಗಿಂತ 28 ವರ್ಷ ಕಡಿಮೆ ವಯಸ್ಸಿನ ಪಾರ್ಟ್ನರ್ ಒಬ್ಬನನ್ನು ಹುಡುಕಿಕೊಂಡಿದ್ದಾರೆ.
ಶರೋನ್ ಹಾಪ್ಕಿನ್ಸ್ ಹೆಸರಿನ ಈ 50 ವರ್ಷದ ಮಹಿಳೆ, ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ತನ್ನ ಸರ್ಚಿಂಗ್ ಆದ್ಯತೆಯನ್ನು 19 ವರ್ಷಕ್ಕೆ ಇಳಿಸಿಕೊಳ್ಳುವ ಮೂಲಕ 22 ವರ್ಷ ವಯಸ್ಸಿನ ಪೆರ‍್ರಿ ಹಾಪ್‌ಸ್ಟೇಯ್ನ್ ಎಂಬಾತನನ್ನು ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈಗ ಇಬ್ಬರೂ ಡೇಟಿಂಗ್ ಮಾಡುತ್ತಿದ್ದು, ಇವರನ್ನು ನೋಡಿದ ಅನೇಕ ಮಂದಿ ಇವರು ಅಮ್ಮ-ಮಗ ಜೋಡಿ ಎಂದು ಅರ್ಥೈಸಿಕೊಳ್ಳುತ್ತಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾದ ಶರೋನ್ 2015ರಲ್ಲಿ ತನ್ನ 16 ವರ್ಷದ ವೈವಾಹಿಕ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದು, ಐದು ವರ್ಷಗಳ ಬಳಿಕ ಪೆರ‍್ರಿಯನ್ನು ಕಂಡುಕೊಂಡಿದ್ದಾರೆ. ಶೆರೋನ್‌ನ ವಯಸ್ಸು ಬಹುತೇಕ ಪೆರ‍್ರಿ ತಾಯಿಯ ವಯಸ್ಸಿನಷ್ಟೇ ಇದೆ.