ಅಮೆಜಾನ್ ಪ್ರೈಂ ವಿಡಿಯೋ ಶೋ ’ತಾಂಡವ್’ ಕಥಾ ಹಂದರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕಂಟೆಂಟ್ ಇದೆ ಎಂಬ ಆಪಾದನೆಗಳು ಬಲವಾದ ಬಳಿಕ ವೆಬ್ ಸೀರೀಸ್‌ನ ನಿರ್ಮಾಣ ತಂಡವು ಕಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದಾಗಿ ತಿಳಿಸಿದೆ.
ಒಂಬತ್ತು ಹಂತದ ರಾಜಕೀಯ ಥ್ರಿಲ್ಲರ್ ಸ್ಟೋರಿಯಾದ ’ತಾಂಡವ್’ ಸೀರೀಸ್‌ನಲ್ಲಿ ಬಾಲಿವುಡ್‌ನ ಎ ಗ್ರೇಡ್ ನಟರಾದ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಸಹ ಅಭಿನಯಿಸಿದ್ದಾರೆ. ಹಿಂದೂ ದೇವತೆಗಳನ್ನು ಅಸಹನೀಯವಾಗಿ ತೋರಿದ ಆಪಾದನೆಯನ್ನು ಈ ವೆಬ್ ಸೀರೀಸ್ ಎದುರಿಸುತ್ತಿದೆ.
ಈ ಕುರಿತಂತೆ ಸೀರೀಸ್‌ನ ಅಧಿಕೃತ ಪ್ರಕಟಣೆ ಹೊರಬಂದಿದ್ದು, “ನಮ್ಮ ದೇಶದ ಜನತೆಯ ಭಾವನೆಗಳಿಗೆ ಬಹಳ ಗೌರವವಿದೆ. ಯಾವುದೇ ವ್ಯಕ್ತಿ, ಜಾತಿ, ಸಮುದಾಯ ಅಥವಾ ವರ್ಣವನ್ನು ಅವಮಾನ ಮಾಡುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ. ಯಾವುದೇ ಸಂಸ್ಥೆ, ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು, ಅಪಮಾನ ಮಾಡುವ ಉದ್ದೇಶವೂ ನಮ್ಮದಲ್ಲ”
“ಯಾರದ್ದೇ ಭಾವನೆಗಳಿಗೆ ಅರಿವಿಲ್ಲದೇ ನೋವುಂಟು ಮಾಡಿದಲ್ಲಿ, ನಾವು ಮತ್ತೊಮ್ಮೆ ಕ್ಷಮೆಯಾಚಿಸುತ್ತೇವೆ” ಎಂದು ತಿಳಿಸಲಾಗಿದೆ.