ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಎತ್ತರ ಹೆಚ್ಚಿಸಿಕೊಂಡ ಯುವಕ…! 20-01-2021 5:21AM IST / No Comments / Posted In: Latest News, International ಸಾಮಾನ್ಯವಾಗಿ ಯುವಕರಿಗೆ ತಾವು 6 ಅಡಿ ಉದ್ದ ಇರಬೇಕು ಅನ್ನೋ ಆಸೆ ಇರುತ್ತೆ. ಹದಿಹರೆಯದಲ್ಲಿ ಇರುವಾಗ ಕನಸು ಕಾಣುವ ಯುವಕರು 20 ವರ್ಷ ಆಗೋದ್ರೊಳಗೆ 6 ಅಡಿ ಎತ್ತರ ಆಗಬೇಕು ಎಂಬ ಕನಸನ್ನ ಕಾಣ್ತಿರ್ತಾರೆ. ಆದರೆ ಎಲ್ಲರ ಕನಸು ನನಸಾಗೋಕೆ ಸಾಧ್ಯವಿಲ್ಲ . ಆದರೆ ಟೆಕ್ಸಾಸ್ನ ಅಲ್ಫೋನ್ಸೊ ಫ್ಲೋರ್ಸ್ ಎಂಬ ವ್ಯಕ್ತಿ ತನ್ನ 28ನೇ ವಯಸ್ಸಿಯನ್ನಲ್ಲಿ ಎತ್ತರವನ್ನ ಹೆಚ್ಚು ಮಾಡಿಕೊಳ್ಳೋಕೆ ಪರ್ಯಾಯ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ. ಫ್ಲೋರ್ಸ್ ಚಿಕ್ಕ ವಯಸ್ಸಿನಿಂದಲೂ ಎತ್ತರವಾಗಿ ಬೆಳೆಯಬೇಕು ಎಂಬ ಕನಸನ್ನ ಕಂಡಿದ್ದರಂತೆ. ಆರು ಅಡಿ ಎತ್ತರ ಆಗಬೇಕು ಅನ್ನೋದು ಇವರ ಆಸೆಯಾಗಿತ್ತಂತೆ. ಆದರೆ ಅವರು 5 ಅಡಿ 11 ಇಂಚು ಎತ್ತರ ಇದ್ದರು. ಬಳಿಕ ದಿ ಲಿಂಬ್ ಪ್ಲಾಸ್ಟ್ ಎಕ್ಸ್ ವಿಶ್ವ ವಿದ್ಯಾಲಯ, ಶಸ್ತ್ರ ಚಿಕಿತ್ಸೆ ಮೂಲಕ ಇವರ ಕನಸನ್ನ ನನಸು ಮಾಡಿದೆ. ಇದೀಗ ಇವರ ಎತ್ತರ 6 ಅಡಿ 1 ಇಂಚಾಗಿದೆ. ಇವರ ಎತ್ತರ ಹೆಚ್ಚಿಸಲು ಶಸ್ತ್ರ ಚಿಕಿತ್ಸೆ ಮಾಡಿದ 7 ತಿಂಗಳು ಬಳಿಕ ಫ್ಲೋರ್ಸ್ ತಮ್ಮ ಕನಸಿನ ಎತ್ತರಕ್ಕೆ ಬೆಳೆದಿದ್ದಾರೆ.