ಈಗಿನ ಕಾಲದಲ್ಲಿ ಹಣ ನೀಡೋಕೆ ತಯಾರಿದ್ದೇವೆ ಎಂದರೆ ಏನ್ ಬೇಕಿದ್ರೂ ಬಾಡಿಗೆಗೆ ಸಿಗುತ್ತೆ. ಕಾರು, ಬೈಕ್, ಮನೆ ಹೀಗೆ ಈ ಬಾಡಿಗೆ ವಸ್ತುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಆದರೆ ಎಂದಾದರೂ ವ್ಯಕ್ತಿಯೊಬ್ಬ ಬಾಡಿಗೆಗೆ ಸಿಗ್ತಾನೆ ಅನ್ನೋ ವಿಚಾರವನ್ನ ಕೇಳಿದ್ದೀರಾ ?
ಆದರೆ ಟೋಕಿಯೋದ 37 ವರ್ಷದ ಶೋಜಿ ಮೋರಿಮೋಟೋ ಎಂಬ ವ್ಯಕ್ತಿ ಇಂತಹದ್ದೊಂದು ಕೆಲಸವನ್ನ ಮಾಡ್ತಿದ್ದಾರೆ. ಬಾಡಿಗೆ ನೀಡಿದವರ ಜೊತೆ ಈ ವ್ಯಕ್ತಿ ಹೋಗ್ತಾರೆ. ಅಂದರೆ ಯಾವುದೇ ಅಪರಿಚಿತ ವ್ಯಕ್ತಿ ಅವರನ್ನ ಬಾಡಿಗೆಗೆ ಕೊಳ್ಳಬಹುದು. ಹಾಗೂ ಆ ವ್ಯಕ್ತಿಗಳ ಜೊತೆ ಶೋಜಿ ಸಮಯ ಕಳೆಯುತ್ತಾರೆ.
ಕೇವಲ ಟ್ವಿಟರ್ನಲ್ಲಿ ಶೋಜಿಗೆ 2 ಲಕ್ಷ 68 ಸಾವಿರ ಫಾಲೋವರ್ಸ್ ಇದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಈ ವ್ಯಕ್ತಿಗೆ ಎಷ್ಟೋ ಮಂದಿ ಕ್ಲೈಂಟ್ ಕೂಡ ಇದ್ದಾರೆ. ಇವರನ್ನ ಯಾರು ಬೇಕಿದ್ದರೂ ಬಾಡಿಗೆಗೆ ಪಡೆಯಬಹುದಾಗಿದೆ. ಇದಕ್ಕಾಗಿ ಇವರಿಗೆ 7000 ರೂಪಾಯಿ ನೀಡಬೇಕು. ಇದರಲ್ಲಿ ಊಟ ಹಾಗೂ ಪ್ರಯಾಣದ ಖರ್ಚು ಸೇರಿದೆ. ಶೋಜಿ ತನ್ನನ್ನ ಬಾಡಿಗೆಗೆ ಪಡೆದ ವ್ಯಕ್ತಿಗಳ ಜೊತೆ ಕುಳಿತು ಅವರ ಮಾತಿಗೆ ಪ್ರತಿಕ್ರಿಯೆ ಕೊಡ್ತಾರೆ ಹಾಗೂ ಅವರು ಕೊಡಿಸಿದ್ದನ್ನು ತಿನ್ನುತ್ತಾರೆ.
ಮೊದಲು ಶೋಜಿ ಈ ಸೇವೆಯನ್ನ ಉಚಿತವಾಗಿ ಮಾಡುತ್ತಿದ್ದರು. ಆದರೆ ಜೂನ್ 2018ರಲ್ಲಿ ಅವರು ಟ್ವಿಟರ್ನಲ್ಲಿ ನನ್ನನ್ನ ನಾನು ಬಾಡಿಗೆಗೆ ನೀಡುತ್ತೇನೆ. ನಾನು ಏನನ್ನೂ ಮಾಡದ ವ್ಯಕ್ತಿ. ನಿಮಗೆ ಅಂಗಡಿಗೆ ಒಬ್ಬರಿಗೆ ಹೋಗೋಕೆ ಕಷ್ಟಾನಾ ? ನಿಮ್ಮ ತಂಡದ ಆಟಗಾರರನ್ನ ಮಿಸ್ ಮಾಡಿಕೊಳ್ತಿದ್ದೀರಾ? ನಾನು ಸುಲಭವಾದ ಕೆಲಸ ಬಿಟ್ಟರೆ ಇನ್ನೇನ್ನನ್ನೂ ಮಾಡಲಾರೆ ಎಂದು ಬರೆದುಕೊಂಡಿದ್ದರು. ಇದಾದ ಮೇಲೆ ಶೋಜಿ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋದ್ರು. ಈವರೆಗೆ 3000ಕ್ಕೂ ಹೆಚ್ಚು ಮಂದಿ ಶೋಜಿಯನ್ನ ಬಾಡಿಗೆಗೆ ಪಡೆದಿದ್ದಾರೆ.
ಜೀವನದಲ್ಲಿ ಬೇಸರಗೊಂಡವರೇ ಹೆಚ್ಚಾಗಿ ಇವರನ್ನ ಬಾಡಿಗೆಗೆ ಪಡೆಯುತ್ತಾರೆ. ಇನ್ನು ಕೆಲವರು ಫೋಟೋ ತೆಗೆಯಲು ಒಬ್ಬ ವ್ಯಕ್ತಿ ಬೇಕು ಅಂತಾ ಇವರನ್ನ ಬಾಡಿಗೆಗೆ ಪಡೆಯುತ್ತಾರೆ. ಆವರು ನಿಮ್ಮ ಜೊತೆ ಆಸ್ಪತ್ರೆಗೆ ಬೇಕಿದ್ದರೂ ಬರ್ತಾರೆ. ಒಂಟಿತನದಿಂದ ಖಿನ್ನತೆಗೆ ಒಳಗಾದ ಅನೇಕ ಮಂದಿ ಇವರನ್ನ ಬಾಡಿಗೆಗೆ ಪಡೆಯುತ್ತಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.