ಎಟಿಎಂ ವಂಚನೆಯನ್ನು ತಡೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹತ್ವದ ಹೆಜ್ಜೆಯಿಟ್ಟಿದೆ. ಫೆಬ್ರವರಿ 1ರಿಂದ ಪಿಎನ್ಬಿಯ ಹೊಸ ನಿಯಮ ಜಾರಿಗೆ ಬರಲಿದೆ. ಇವಿಎಂ ಇಲ್ಲದ ಎಟಿಎಂಗಳಲ್ಲಿ ವಹಿವಾಟು ನಡೆಸಲು ಸಾಧ್ಯವಿಲ್ಲವೆಂದು ಪಿಎನ್ಬಿ ಗ್ರಾಹಕರಿಗೆ ಹೇಳಿದೆ.
ಪಿಎನ್ಬಿ ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಎಟಿಎಂ ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲು ಫೆಬ್ರವರಿ ಒಂದರಿಂದ ಇವಿಎಂ ಇಲ್ಲದ ಎಟಿಎಂ ಯಂತ್ರಗಳಿಂದ ವಹಿವಾಟುಗಳನ್ನು ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದೆ. ಗೋ ಡಿಜಿಟಲ್, ಗೋ ಸೇಫ್ ಎಂದು ಬ್ಯಾಂಕ್ ಹೇಳಿದೆ.
ಇವಿಎಂ ಇಲ್ಲದ ಎಟಿಎಂನಲ್ಲಿ ಕಾರ್ಡ್ ಬಳಸಲಾಗುವುದಿಲ್ಲ. ಮ್ಯಾಗ್ನೆಟಿಕ್ ಸ್ಟ್ರಿಪ್ ಮೂಲಕ ವ್ಯವಹಾರ ನಡೆಸಲಾಗುತ್ತದೆ. ಇದಲ್ಲದೆ ಇವಿಎಂ ಇಲ್ಲದ ಎಟಿಎಂ ಮಶಿನ್ ನಲ್ಲಿ ಕೆಲವು ಸೆಕೆಂಡ್ ಕಾಲ ಕಾರ್ಡ್ ಲಾಕ್ ಆಗುತ್ತದೆ. ಪಿಎನ್ಬಿ ಅಪ್ಲಿಕೇಷನ್ ಮೂಲಕ ಡೆಬಿಟ್ ಕಾರ್ಡ್ ಆನ್/ಆಫ್ ಮಾಡುವ ಸೌಲಭ್ಯ ನೀಡಿದೆ. ಕಾರ್ಡ್ ಬಳಸದಿದ್ದರೆ ಕಾರ್ಡನ್ನು ಆಫ್ ಮಾಡಬಹುದು. ಇದ್ರಿಂದ ಬ್ಯಾಂಕ್ ನಲ್ಲಿರುವ ಹಣ ಸುರಕ್ಷಿತವಾಗಿರುತ್ತದೆ.