ಭಾರತ್ ಬಯೋಟೆಕ್ ನ ಕೊರೊನಾ ಲಸಿಕೆ ಕೋವಾಕ್ಸಿನ್ ಗೆ ಅನುಮೋದನೆ ಸಿಕ್ಕಿದೆ. ಆದ್ರೆ ಲಸಿಕೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಡೇಟಾ ಸುರಕ್ಷತೆ, ಲಸಿಕೆ ಪರಿಣಾಮ, ಪಾರದರ್ಶಕತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಲಾಗಿದೆ. ಆದ್ರೆ ಲಸಿಕೆ ಸುರಕ್ಷಿತವಾಗಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ ಹೇಳಿದ್ದಾರೆ.
ಲಸಿಕೆ ಶೇಕಡಾ 200ರಷ್ಟು ಸುರಕ್ಷಿತವಾಗಿದೆ. ನಮಗೆ ಲಸಿಕೆ ತಯಾರಿಸಿ ಅನುಭವವಿದೆ. ವಿಜ್ಞಾನವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆಂದು ಕೃಷ್ಣ ಎಲ್ಲಾ ಹೇಳಿದ್ದಾರೆ. ಯಾವುದೇ ಇಮ್ಯುನೊಸೊಪ್ರೊಮೈಸ್ಡ್ ಅಥವಾ ಕಾಯಿಲೆ ಹೊಂದಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರೆ ಕೋವಾಕ್ಸಿನ್ ತೆಗೆದುಕೊಳ್ಳಬಾರದು ಎಂದು ಕಂಪನಿ ಹೇಳಿದೆ.
ರೋಗ ನಿರೋಧಕ ಶಕ್ತಿ ಕಡಿಮೆಯಿರುವವರು, ರಕ್ತ ಸಂಬಂಧಿ ಕಾಯಿಲೆಯಿದ್ದರೆ ಅಥವಾ ರಕ್ತ ತೆಳುವಾಗಿದ್ದರೆ ಜನರು ಭಾರತ್ ಬಯೋಟೆಕ್ ಲಸಿಕೆ ತೆಗೆದುಕೊಳ್ಳಬಾರದು. ಕೆಲ ದಿನಗಳಿಂದ ಜ್ವರ ಹಾಗೂ ಅಲರ್ಜಿ ಸಮಸ್ಯೆ ಹೊಂದಿದ್ದರೆ ಲಸಿಕೆ ತೆಗೆದುಕೊಳ್ಳಬೇಡಿ ಎಂದು ಕಂಪನಿ ಹೇಳಿದೆ.
ಗರ್ಭಿಣಿಯರು ಹಾಗೂ ಸ್ತನ್ಯಪಾನ ಮಾಡಿಸುತ್ತಿರುವವರು ಲಸಿಕೆ ತೆಗೆದುಕೊಳ್ಳಬೇಡಿ ಎಂದು ಈಗಾಗಲೇ ಸರ್ಕಾರ ಹೇಳಿದೆ. ಕೋವಾಕ್ಸಿನ್ ಲಸಿಕೆ ತೆಗೆದುಕೊಂಡ ನಂತ್ರ ಕೊರೊನಾ ಲಕ್ಷಣ ಕಂಡು ಬಂದ್ರೆ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ಇದರ ಫಲಿತಾಂಶವನ್ನು ಪುರಾವೆಯಾಗಿ ಪರಿಗಣಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಹಾಗೆ ಕೊರೊನಾ ಲಸಿಕೆ ತೆಗೆದುಕೊಳ್ಳುವ ಮೊದಲು ಹಾಗೂ ನಂತ್ರ ಬೇರೆ ಔಷಧಿ ತೆಗೆದುಕೊಂಡರೆ ಅದನ್ನು ಅವಶ್ಯವಾಗಿ ಮಾಹಿತಿ ನೀಡಬೇಕು. ಲಸಿಕೆ ಹಾಕಿಸಿಕೊಂಡವರು ನಿಯಮಗಳನ್ನು ಪಾಲಿಸಬೇಕಾಗುತ್ತದೆ.