ಒಡೆದ ಹೃದಯವನ್ನು ಮತ್ತೆ ಸರಿಮಾಡಿಕೊಂಡು ಸಹಜ ಜೀವನದ ಪಥದಲ್ಲಿ ನಡೆಯುವುದು ಎಂಥವರಿಗೂ ಬಹಳ ಕಷ್ಟವಾದ ಕೆಲಸ. ಕೆಲ ಮಂದಿ ಅದೆಷ್ಟು ಆಳವಾಗಿ ರೊಮ್ಯಾಂಟಿಕ್ ಸಂಬಂಧದಲ್ಲಿ ಮುಳುಗಿರುತ್ತಾರೆ ಎಂದರೆ, ಬ್ರೇಕ್ ಅಪ್ ಆಗಿಬಿಟ್ಟರೆ ಜೀವನದುದ್ದಕ್ಕೂ ನೋವಿನಲ್ಲೇ ಇದ್ದುಬಿಡುತ್ತಾರೆ.
ಇಂಥದ್ದೇ ಪರಿಸ್ಥಿತಿ ಎದುರಿಸಿ ಬಂದ ಡೆಹ್ರಾಡೂನ್‌ನ ಯುವಕನೊಬ್ಬ, ಹೊಸ ಬದುಕಿನ ಹಾದಿಗೆ ಬರಲೆಂದು ಚಹಾ ಅಂಗಡಿಯ ಬ್ಯಸಿನೆಸ್ ಆರಂಭಿಸಿದ್ದಾನೆ. 21 ವರ್ಷದ ದಿವ್ಯಾಂಶು ಬಾತ್ರ, ತನ್ನ ಈ ಟೀ ಅಂಗಡಿಗೆ, ’ದಿಲ್ ಟೂಟಾ ಆಶಿಕ್- ಚಾಯ್ ವಾಲಾ’ ಎಂದು ಹೆಸರಿಟ್ಟಿದ್ದಾನೆ.
ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಲವ್ ಬ್ರೇಕಪ್ ಆದ ಕಾರಣ ತನ್ನ ಈ ಹೊಸ ಬ್ಯುಸಿನೆಸ್‌ಗೆ ಈ ಹೆಸರಿಟ್ಟಿದ್ದಾನೆ ಈತ.
“ನನ್ನ ಹೈಸ್ಕೂಲ್ ದಿನಗಳಿಂದಲೂ ನನಗೊಬ್ಬ ಗರ್ಲ್‌ಫ್ರೆಂಡ್ ಇದ್ದು, ಆಕೆಯ ಹೆತ್ತವರು ನಮ್ಮ ಪ್ರೇಮದ ವಿರುದ್ಧ ಇದ್ದ ಕಾರಣ ಆಕೆಯೊಂದಿಗೆ ಬ್ರೇಕ್‌ಅಪ್ ಆಗಿದೆ. ಇದಾದ ಬಳಿಕ ಆರು ತಿಂಗಳ ಮಟ್ಟಿಗೆ ಡಿಪ್ರೆಸ್ ಆಗಿದ್ದ ನಾನು ಬರೀ ಪಬ್‌ಜಿ ಆಡಿಕೊಂಡು ಕಾಲ ಕಳೆದಿದ್ದೆ” ಎಂದು ಬಾತ್ರಾ ಹೇಳಿಕೊಂಡಿದ್ದಾನೆ.
ಆದರೆ ಇದೇ ನೋವಿನಲ್ಲಿ ಬಹಳ ದಿನ ಕಳೆಯಬಾರದು ಎಂದು ನಿರ್ಧರಿಸಿದ ಬಾತ್ರಾ, ತನ್ನ ಉಳಿತಾಯದ ದುಡ್ಡನ್ನು ಬಳಸಿಕೊಂಡು ಟೀ ಅಂಗಡಿ ತೆರೆದಿದ್ದಾನೆ, ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಬಾತ್ರಾ, ತನ್ನ ಕಿರಿಯ ಸಹೋದರ ರಾಹುಲ್ ಜೊತೆಗೆ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
https://www.instagram.com/p/CJBl4smnjY0/?utm_source=ig_web_copy_link
https://www.instagram.com/p/CJF6TFGHxUR/?utm_source=ig_web_copy_link