ನವದೆಹಲಿ: ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ‘ತಾಂಡವ್’ ವೆಬ್ ಸೀರಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಲಾಗಿದೆ.
‘ತಾಂಡವ್’ ವೆಬ್ ಸಿರೀಸ್ ತಂಡದಿಂದ ಕೊನೆಗೂ ಕ್ಷಮಾಪಣೆ ಕೋರಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವೆಬ್ ಸಿರೀಸ್ ಕಲಾವಿದರು ಮತ್ತು ತಂಡದಿಂದ ಕ್ಷಮಾಪಣೆ ಕೋರಲಾಗಿದೆ.
‘ತಾಂಡವ್’ ವೆಬ್ ಸೀರಿಸ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ದೇಶದ ಹಲವೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದೆಹಲಿ, ಮುಂಬೈ, ಲಖ್ನೋ ಸೇರಿದಂತೆ ಹಲವೆಡೆ ದೂರು ದಾಖಲಾಗಿತ್ತು. ಅಲ್ಲದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವಾದಕ್ಕೆ ಸಂಬಂಧಿಸಿದಂತೆ ವಿವರ ನೀಡಲು ಅಮೆಜಾನ್ ಪ್ರೈಮ್ ಗೆ ಸೂಚನೆ ನೀಡಿದ್ದು, ಇವೆಲ್ಲ ಬೆಳವಣಿಗೆಗಳ ನಂತರ ವೆಬ್ ಸಿರೀಸ್ ತಂಡದಿಂದ ಕ್ಷಮಾಪಣೆ ಕೇಳಲಾಗಿದೆ.