alex Certify ಇನ್ಮುಂದೆ ಕಾಲರ್​ ಟ್ಯೂನ್​​ನಲ್ಲಿ ಕೇಳಿಸೋಲ್ಲ ʼಬಿಗ್‌ ಬಿ​ʼ ಕೊರೊನಾ ಜಾಗೃತಿ ಧ್ವನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಕಾಲರ್​ ಟ್ಯೂನ್​​ನಲ್ಲಿ ಕೇಳಿಸೋಲ್ಲ ʼಬಿಗ್‌ ಬಿ​ʼ ಕೊರೊನಾ ಜಾಗೃತಿ ಧ್ವನಿ

ಕೊರೊನಾ ವೈರಸ್​ ಸಂಕಷ್ಟ ದೇಶದಲ್ಲಿ ಶುರುವಾದಾಗಿನಿಂದ ಫೋನ್​ ಕರೆ ಮಾಡುವ ವೇಳೆ ಜನರು ಕೊರೊನಾ ಜಾಗೃತಿ ಸಂದೇಶವನ್ನ ಕೇಳುತ್ತಾರೆ. ಸಧ್ಯ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ನೀಡುತ್ತಿರುವ ಆಡಿಯೋ ಸಂದೇಶ ಎಲ್ಲರ ಮೊಬೈಲ್​ನಲ್ಲಿ ಕಾಲರ್ ಟ್ಯೂನ್​ನಂತೆ ಕೇಳುತ್ತಿತ್ತು.

ಕೊರೊನಾ ವಿರುದ್ಧ ಸಂಪೂರ್ಣ ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಹೋರಾಡುತ್ತಿದೆ ಎಂದು ಹೇಳುವ ಮೂಲಕ ಅಮಿತಾಬ್​ ಬಚ್ಚನ್​ರ ಧ್ವನಿಯಲ್ಲಿ ಜಾಗೃತಿ ಸಂದೇಶ ಆರಂಭವಾಗುತ್ತಿತ್ತು. ಕಾಲರ್​ ಟ್ಯೂನ್​ನಲ್ಲಿ ಆಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರ ಕಾಪಾಡೋದ್ರ ಬಗ್ಗೆ ಹೇಳಲಾಗುತ್ತಿತ್ತು.

ಆದರೆ ಜನವರಿ 16ರಿಂದ ದೇಶದಲ್ಲಿ ಕೊರೊನಾ ವ್ಯಾಕ್ಸಿನ್​ ಡ್ರೈವ್ ಆರಂಭವಾಗಿದ್ದು ಕಡ್ಡಾಯ ಕರೆ ಧ್ವನಿಯನ್ನ ಬದಲಾವಣೆ ಮಾಡಲಾಗಿದೆ. ಈ ಹೊಸ ಕಾಲರ್​ ಟ್ಯೂನ್​​ನಲ್ಲಿ ಸ್ತ್ರೀ ಧ್ವನಿ ಇದ್ದು ಇದರಲ್ಲಿ ಲಸಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗ್ತಿದೆ.

ಹೊಸ ವರ್ಷವು ಕೋವಿಡ್​ 19 ವಿರುದ್ಧ ಲಸಿಕೆಗಳ ರೂಪದಲ್ಲಿ ಹೊಸ ಆಶಾ ಕಿರಣವನ್ನ ಹೊತ್ತು ತಂದಿದೆ ಎಂದು ಈ ಆಡಿಯೋ ಸಂದೇಶ ಆರಂಭವಾಗುತ್ತದೆ. ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಲಸಿಕೆಗಳು ವೈರಸ್​ ವಿರುದ್ಧ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಈ ಕಾಲರ್​ ಟ್ಯೂನ್​ನಲ್ಲಿ ಹೇಳಲಾಗುತ್ತದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...