ಕೊರೊನಾ ಕಾರಣದಿಂದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಮಾನ್ಯತೆಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ. ಆರ್ಟಿಒ ಕಚೇರಿಗೆ ಹೋಗದೆ ಚಾಲನಾ ಪರವಾನಗಿಯನ್ನು ನೀವು ನವೀಕರಿಸಬಹುದು. ಸಾರಿಗೆ ಸಚಿವಾಲಯದ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಅಲ್ಲಿ ನವೀಕರಿಸಬಹುದು.
ಸಾರಿಗೆಯ ಅಧಿಕೃತ ವೆಬ್ಸೈಟ್ https://parivahan.gov.in/ ಗೆ ಹೋಗಬೇಕು. ಇದಕ್ಕಾಗಿ ನೀವು ಕೆಲವೊಂದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಚಾಲನಾ ಪರವಾನಗಿ, ಪಾಸ್ ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್ ಫೋಟೋ ಅಪ್ಲೋಡ್ ಮಾಡಬೇಕು. ಇದಾದ 30 ದಿನಗಳೊಳಗೆ ನಿಮ್ಮ ಮನೆ ವಿಳಾಸಕ್ಕೆ ಹೊಸ ಚಾಲನಾ ಪರವಾನಗಿ ಬರುತ್ತದೆ.
ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ನಿಮ್ಮ ಚಾಲನಾ ಪರವಾನಗಿ ಅವಧಿ ಮುಗಿದಿದ್ದು, ಆನ್‌ಲೈನ್‌ನಲ್ಲಿ ನವೀಕರಣ ಬಯಸಿದ್ದರೆ, ಫಾರ್ಮ್ 1 ಎ ಭರ್ತಿ ಮಾಡುವ ಜೊತೆಗೆ ವೈದ್ಯರಿಂದ ಪ್ರಮಾಣೀಕರಿಸಬೇಕು. Parivahan.gov.in ವೆಬ್‌ಸೈಟ್‌ನಲ್ಲಿ ಈ ಫಾರ್ಮ್ ಸುಲಭವಾಗಿ ಸಿಗುತ್ತದೆ.
https://parivahan.gov.in/ ವೆಬ್ಸೈಟ್ ನ ಸರ್ವಿಸಸ್ ಆನ್ ಡ್ರೈವಿಂಗ್ ಲೈಸೆನ್ಸ್ ಮೇಲೆ ಕ್ಲಿಕ್ ಮಾಡಬೇಕು. ಕೊಟ್ಟಿರುವ ಅರ್ಜಿ ಭರ್ತಿ ಮಾಡಿ ದಾಖಲೆ ಅಪ್ಲೋಡ್ ಮಾಡಬೇಕು.ನಂತ್ರ ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.