alex Certify ಇಲ್ಲಿದೆ ಸಂಸತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಭಾಷೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸಂಸತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಭಾಷೆಗಳ ಮಾಹಿತಿ

Sanskrit 5th Most Used Language in Rajya Sabha after Hindi, Urdu

ರಾಜ್ಯಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹಿಂದಿಗಿಂತಲೂ ಹೆಚ್ಚಿದ್ದು, 2018-2020ರ ಅವಧಿಯಲ್ಲಿ ಸಂಸದರು 10 ವಿವಿಧ ಭಾಷೆಗಳಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಂವಿಧಾನದಲ್ಲಿ ಅಧಿಕೃತವಾಗಿ ಮಾನ್ಯ ಮಾಡಲಾದ 22 ಭಾಷೆಗಳ ಪೈಕಿ 10 ಭಾಷೆಗಳು ರಾಜ್ಯಸಭೆಯ ಪ್ರಾಂಗಣದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಾರ್ಧನಿಸಿವೆ.

2019-20ರ ದಾಖಲೆಗಳ ಪ್ರಕಾರ — ಹಿಂದಿ, ತೆಲುಗು, ಉರ್ದು ಹಾಗೂ ತಮಿಳು ಭಾಷೆಗಳು ರಾಜ್ಯಸಭೆಯಲ್ಲಿ ಅತ್ಯಂತ ಹೆಚ್ಚು ಬಳಸಲ್ಪಟ್ಟ ಭಾಷೆಗಳಾಗಿದ್ದು, ಇವುಗಳ ನಂತರ ಸ್ಥಾನದಲ್ಲಿ ಸಂಸ್ಕೃತ ಇದೆ.

2018-2020ರ ಅವಧಿಯಲ್ಲಿ ಒಟ್ಟಾರೆ 163 ಸಭೆಗಳು ನಡೆದಿದ್ದು, 135 ನಿದರ್ಶನಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆಯಾಗಿದೆ. ಈ ವೇಳೆ ಸಂಭವಿಸಿದ ಚರ್ಚೆಗಳ ಅವಧಿಯಲ್ಲಿ ಒಟ್ಟಾರೆ 66 ಬಾರಿ ತರ್ಜುಮೆ ಮಾಡಲಾಗಿದೆ.

ಇದೇ ಅವಧಿಯಲ್ಲಿ ಐದು ಬಾರಿ ಕನ್ನಡದ ಕಂಪನ್ನು ಮೇಲ್ಮನೆಯಲ್ಲಿ ಪಸರಿಸಲಾಗಿದೆ.

1952ರಿಂದ ಇದೇ ಮೊದಲ ಬಾರಿಗೆ ಡೋಗ್ರಿ, ಕಾಶ್ಮೀರಿ, ಕೊಂಕಣಿ ಹಾಗೂ ಸಂತಾಲಿ ಭಾಷೆಗಳನ್ನು ಬಳಸಲಾಗಿದೆ. ಈ ನಾಲ್ಕು ಭಾಷೆಗಳ ಜೊತೆಗೆ ಸಿಂಧಿ ಭಾಷೆಯನ್ನು ಸಂಸತ್ತಿನ ಪ್ರಾಂಗಣದಲ್ಲಿ ಬಳಸಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒದಗಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...