ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ವೈಸ್ ಚೇರ್ಮನ್ ಜಯ್ ವೈ ಲೀಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನ ದಕ್ಷಿಣ ಕೊರಿಯಾದ ಸಿಯೋಲ್ ಹೈಕೋರ್ಟ್ ವಿಧಿಸಿದೆ.
52 ವರ್ಷದ ಲೀ ಮಾಜಿ ಅಧ್ಯಕ್ಷ ಪಾರ್ಕ್ ಗಿಯಾನ್ ಹೆ ಅವರ ಸಹವರ್ತಿಗೆ ಲಂಚ ನೀಡಿದ ಆರೋಪವನ್ನ ಎದುರಿಸುತ್ತಿದ್ದರು. ಹೀಗಾಗಿ ಅವರನ್ನ 2017ರಲ್ಲಿ ಸೆರೆವಾಸವನ್ನೂ ಅನುಭವಿಸಿದ್ದರು.
ಆದರೆ ಶಿಕ್ಷೆಯನ್ನು ಕಡಿಮೆಗೊಳಿಸಲಾಯಿತು ಮತ್ತು ಮೇಲ್ಮನವಿಯಲ್ಲಿ ಅಮಾನತುಗೊಳಿಸಲಾಗಿದೆ. ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಯೋಲ್ ಹೈಕೋರ್ಟ್ಗೆ ಕಳುಹಿಸಿತ್ತು, ಈ ಕೋರ್ಟ್ ಸೋಮವಾರ ಪ್ರಕರಣ ಸಂಬಂಧ ತೀರ್ಪು ನೀಡಿತು.