alex Certify ಸ್ಟೀವ್ ಸ್ಮಿತ್ ಸ್ಟೈಲ್ ನಕಲು ಮಾಡಿದ ರೋಹಿತ್ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟೀವ್ ಸ್ಮಿತ್ ಸ್ಟೈಲ್ ನಕಲು ಮಾಡಿದ ರೋಹಿತ್ ಶರ್ಮಾ

ಭಾರತ-ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ಕಠಿಣ ಸ್ಪರ್ಧೆ ಮುಂದುವರೆದಿದೆ. ಆಟದ ನಾಲ್ಕನೇ ದಿನ ಮೈದಾನದಲ್ಲಿ ತಮಾಷೆ ಘಟನೆ ನಡೆದಿದೆ. ರೋಹಿತ್ ಶರ್ಮಾ ನೋಡಿ ಅಭಿಮಾನಿಗಳು ನಕ್ಕಿದ್ದಾರೆ.

ನಾಲ್ಕನೇ ದಿನ ಪಂದ್ಯದ ಮಧ್ಯೆ ಒಂದು ನಿಮಿಷಗಳ ವಿಶ್ರಾಂತಿ ಘೋಷಿಸಲಾಗಿತ್ತು. ಈ ವೇಳೆ  ಬ್ಯಾಟಿಂಗ್ ಮಾಡ್ತಿದ್ದ ಕ್ಯಾಮರೂನ್ ಗ್ರೀನ್ ಹಾಗೂ ಸ್ಟೀವ್ ಸ್ಮಿತ್ ಪಿಚ್ ನಿಂದ ಹೊರಗೆ ನಿಂತಿದ್ದರು.ಈ ವೇಳೆ ಪಿಚ್ ತಲುಪಿದ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ನಟನೆ ಮಾಡಿದ್ದಾರೆ. ಸ್ಮಿತ್ ಬ್ಯಾಟಿಂಗ್ ಶೈಲಿಯನ್ನು ನಕಲು ಮಾಡಿದ ಶರ್ಮಾ ಅಲ್ಲಿಂದ ಹೊರಟುಹೋಗಿದ್ದಾರೆ.

ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಮಿತ್ ಇದನ್ನು ಗಮನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶರ್ಮಾ ಈ ವಿಡಿಯೋ ವೈರಲ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 369 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 336 ರನ್ ಗಳಿಸಿತ್ತು.

https://twitter.com/i/status/1350994557337538561

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...