ಹಿಮಾಲಯ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಹಿಮಗಲ್ಲುಗಳನ್ನು ಹಾದು ಹೋಗಿ ಮಹಿಳೆಯಯ ಆರೋಗ್ಯ ಹಾಗೂ ಮಾರ್ಷಲ್ ಕಲೆಗಳ ಮೇಲೆ ಅವರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಬೌದ್ಧ ಕುಂಗ್‌ಫೂ ದಾದಿಯರು ಮುಂದಾಗಿದ್ದಾರೆ.
ತಮ್ಮ ಕೌಶಲ್ಯಗಳನ್ನು ಧಾರೆ ಎರೆಯುವ ಮೂಲಕ ಯುವತಿಯರಿಗೆ ಆತ್ಮರಕ್ಷಣೆ ಕಲೆಯನ್ನು ಕರಗತ ಮಾಡುವುದಲ್ಲದೇ, ಮಾನವ ಕಳ್ಳಸಾಗಾಟ ಹಾಗೂ ಪರಿಸರ ಸಂರಕ್ಷಣೆಯ ಕುರಿತಂತೆ ಜಾಗೃತಿ ಮೂಡಿಸಲು ಮುಂದಾಗಿರುವ ಈ ದ್ರುಕ್ಪಾ ದಾದಿಯರು ಹಿಮಾಲಯದ ಸಾವಿರಾರು ಮಹಿಳೆಯರ ಜೀವನವನ್ನೇ ಬದಲಿಸುತ್ತಿದ್ದಾರೆ.
9- 60 ವರ್ಷ ವಯಸ್ಸಿನ ಈ ದಾದಿಯರು ಯೂರೋಪ್‌ನ ಪ್ರತಿಷ್ಠಿತ ಮಾನವ ಹಕ್ಕುಗಳ ಸನ್ಮಾನವಾದ ವಾಕ್ಲಾವ್ ಹಾವೆಲ್ ಗೌರವಕ್ಕೆ ಭಾಜನರಾಗಲು ಕೊನೆಯ ಹಂತದಲ್ಲಿರುವ ಮೂವರು ಫೈನಲಿಸ್ಟ್‌ಗಳ ಪೈಕಿ ಇದ್ದಾರೆ.
ಭಾರತದ ಮೂಲದ ಈ ಇಬ್ಬರೂ ದಾದಿಯರು ಕಾಠ್ಮಂಡುವಿನಲ್ಲಿರುವ ದ್ರುಕ್ ಅಮಿತಾಭಾ ಮೌಂಟೆನ್ ನನ್ನರಿಯಲ್ಲಿ ತಮ್ಮೆಲ್ಲಾ ಕೌಶಲ್ಯಗಳನ್ನು ತರಬೇತಿ ಪಡೆದಿದ್ದಾರೆ. ಶಾಂತಿಯ ಯೋಧರು ಎಂದೇ ಖ್ಯಾತರಾದ ಈ ದ್ರುಕ್ಪಾ ದಾದಿಯರನ್ನು ತರಬೇತಿಗೊಳಿಸಲೆಂದು ಬೌದ್ಧ ಧರ್ಮಗುರು, 12ನೇ ಗ್ಯಾಲ್ವಾಂಗ್ ದ್ರುಕ್ಪಾ ಈ ನನ್ನರಿಯನ್ನು ಸ್ಥಾಪಿಸಿದ್ದಾರೆ.