alex Certify ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಲಕ್ನೋದಲ್ಲಿ ಘಟನೆ ನಡೆದಿದೆ.

ಜೀವನ್ ಸಾಥಿ ಡಾಟ್ ಕಾಂ ಮೂಲಕ ಹುಡುಗಿ ಮನೋಜ್ ಅಗ್ರವಾಲ್ ಎಂಬಾತನಿಗೆ ಪರಿಚಯವಾಗಿದ್ದಳು. ಬಿಹಾರ್ ಮೂಲದ ಪ್ರಿಯಾಂಕಾ ಸಿಂಗ್ ಡಿಗ್ರಿ ಮಾಡ್ತಿದ್ದಳಂತೆ. ತಂದೆ-ತಾಯಿಯಿಲ್ಲ, ಚಿಕ್ಕಮ್ಮನ ಜೊತೆ ದೆಹಲಿಯಲ್ಲಿದ್ದೇನೆಂದು ಪ್ರಿಯಾಂಕ ಹೇಳಿದ್ದಳಂತೆ. ಇಬ್ಬರ ಮನೆಯಲ್ಲಿ ಮಾತುಕತೆ ನಡೆಸಿ ಮದುವೆ ಫಿಕ್ಸ್ ಮಾಡಿದ್ದರಂತೆ. ಮದುವೆಗೂ ಮುನ್ನ ಇಬ್ಬರೂ ಸುತ್ತಾಡಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ಪ್ರಿಯಾಂಕಾ ಆಗಾಗ ಹಣ ಕೇಳಿದ್ದಾಳೆ. ಕೈನಲ್ಲಿದ್ದ 6 ಲಕ್ಷ ರೂಪಾಯಿಯನ್ನು ಪ್ರಿಯಾಂಕಾ ಖಾಲಿ ಮಾಡಿದ್ದಾಳಂತೆ. ಅಷ್ಟೇ ಅಲ್ಲ ಆಗಾಗ ಭೇಟಿಯಾಗ್ತಿದ್ದ ಪ್ರಿಯಾಂಕಾ 2 ಲಕ್ಷ ರೂಪಾಯಿಯಷ್ಟು ಹಣವನ್ನು ಶಾಪಿಂಗ್ ಗೆ ಖರ್ಚು ಮಾಡಿದ್ದಾಳಂತೆ.

ನಂತ್ರ ಪ್ರಿಯಾಂಕಾ ಸಂಪರ್ಕಕ್ಕೆ ಸಿಕ್ಕಿಲ್ಲ. ಫೋನ್ ಹೋಗ್ತಿರಲಿಲ್ಲ. ಆಕೆ ಪಾನ್ ಕಾರ್ಡ್ ಕೂಡ ನಕಲಿ ಎಂಬುದು ತಿಳಿದ ಮನೋಜ್ ಪೊಲೀಸರಿಗೆ ದೂರು ನೀಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...